ತಿಲಕ್ ವರ್ಮಾ, ಸಂಜು ಸ್ಯಾಮ್ಸನ್‌ ಭರ್ಜರಿ ಶತಕ: ಆಫ್ರಿಕಾ ಗೆಲುವಿಗೆ 284 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಹಾಗು ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ್ದಾರೆ. ಈ ಮೂಲಕ 20 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡ ಭಾರತ ತಂಡ ದಕ್ಷಿಣ ಆಫ್ರಿಕಾಗೆ 284 ರನ್‌ಗಳ ಬಿಗ್ ಟಾರ್ಗೆಟ್ ನೀಡಿದೆ.

ಜೊಹಾನ್ಸ್‌ಬರ್ಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಿಕ್ಸರ್‌, ಬೌಂಡರಿಗಳ ಸುರಿಮಳೆಯೇ ಸುರಿಸಿದ ಭಾರತದ ಬ್ಯಾಟ್ಸಮನ್ ಗಳು , ಉತ್ತಮ ಪ್ರದರ್ಶನ ನೀಡಿದರು.

ಬ್ಯಾಕ್‌ ಟು ಬ್ಯಾಕ್ ಸೆಂಜುರಿ ಸಿಡಿಸಿದ ಸಂಜು ಸ್ಯಾಮ್ಸನ್‌ ಅವರು ಮತ್ತೆ ಅಬ್ಬರದ ಆಟ ಪ್ರದರ್ಶನ ಮಾಡಿದರು. 8 ಸಿಕ್ಸರ್, 6 ಬೌಂಡರಿಗಳನ್ನು ಸಿಡಿಸಿದ ಸಂಜು ಭರ್ಜರಿ ಶತಕ ಸಿಡಿಸಿದರು. ಸಂಜು ಸ್ಯಾಮ್ಸನ್ ಜೊತೆ ಸೇರಿದ ತಿಲಕ್ ವರ್ಮಾ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಿಲಕ್ ಕೂಡ 9 ಸಿಕ್ಸರ್ ಸಿಡಿಸಿ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದರು. ಇವರಿಬ್ಬರ ಶತಕದ ಜೊತೆಯಾಟ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಸುಸ್ತಾಗುವಂತೆ ಮಾಡಿತು.

ಅಜೇಯರಾಗಿ ಕ್ರೀಸ್‌ನಲ್ಲಿ ಉಳಿದ ತಿಲಕ್ ವರ್ಮಾ 120 ರನ್ ಸಿಡಿಸಿದ್ರೆ, ಸಂಜು ಸ್ಯಾಮ್ಸನ್ 109 ರನ್‌ ಗಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!