ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಸಣ್ಣ ವಿಷಯಗಳಿಗೆ ಆದ್ಯತೆ ಕೊಡುತ್ತಾ ಮುಖ್ಯ ವಿಷಯ ಕಡೆಗಣಿಸಬೇಡಿ. ಅದು ಮುಂದಕ್ಕೆ ದೊಡ್ಡ ಸಮಸ್ಯೆ ಸೃಷ್ಟಿಸಬಹುದು. ವೃತ್ತಿಯಲ್ಲಿ ಹಿನ್ನಡ.
ವೃಷಭ
ಅತಿಯಾದ ಭಾವುಕತೆ ಒಳ್ಳೆಯದಲ್ಲ. ಕೆಲವು ವಿಷಯಗಳಲ್ಲಿ ಪ್ರಾಕ್ಟಿಕಲ್ ಆಗಿ ಚಿಂತಿಸಿ. ಪ್ರೀತಿಪಾತ್ರರ ಬಗ್ಗೆ ಕಾಳಜಿಯಿರಲಿ.
ಮಿಥುನ
ನಿಮ್ಮ ಸಂವಹನ ಕಲೆ ಶ್ಲಾಘನೆಗೆ ಪಾತ್ರವಾಗು ವುದು. ಮಾತಿನಿಂದಲೆ ಬಿಕ್ಕಟ್ಟನ್ನು ಸಂಭಾಳಿಸುವಿರಿ. ಕೌಟುಂಬಿಕ ಮನಸ್ತಾಪ ಉಲ್ಬಣಿಸದಿರಲಿ.
ಕಟಕ
ನಿಮ್ಮ ವ್ಯವಹಾರದಲ್ಲಿ ತೀವ್ರ ಸ್ಪರ್ಧೆ ಎದುರಿ ಸುವಿರಿ. ಮುಖ್ಯ ವಿಷಯದಲ್ಲಿ ಸ್ಪಷ್ಟ ನಿಲುವು ಅಗತ್ಯ. ಸಂಗಾತಿ ಜತೆ ಸಹನೆಯಿಂದ ವರ್ತಿಸಿ.
ಸಿಂಹ
ನಿಮ್ಮ ಗುರಿಯಿಂದ ವಿಚಲಿತಗೊಳಿಸಲು ಕೆಲವರ ಯತ್ನ. ಅದಕ್ಕೆ ಆಸ್ಪದ ನೀಡದಿರಿ. ಅನವಶ್ಯ ವೆಚ್ಚ ತಪ್ಪಿಸಿ. ಆತ್ಮೀಯರ ಜತೆ ಕಾಲಕ್ಷೇಪ.
ಕನ್ಯಾ
ವೃತ್ತಿಯಲ್ಲಿ ಸಫಲ ದಿನ. ನಿಮ್ಮ ಗುರಿಯಿಂದ ವಿಚಲಿತರಾಗದಿರಿ. ಕೌಟುಂಬಿಕ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ.
ತುಲಾ
ನೀವಿಂದು ಪ್ರಾಕ್ಟಿಕಲ್ ಆಗಿ ವರ್ತಿಸುವಿರಿ. ಇದರಿಂದ ಯಾವುದೇ ಸಮಸ್ಯೆ ನಿಭಾಯಿಸಲು ಶಕ್ತ. ಪ್ರೀತಿಪಾತ್ರರಿಂದ ಸಂತೋಷದ ಸುದ್ದಿ.
ವೃಶ್ಚಿಕ
ನಿಮ್ಮ ಉತ್ಸಾಹ ಕುಂದಿಸಲು ಕೆಲವರು ಯತ್ನಿಸುವರು. ನಿಮ್ಮ ಕಾರ್ಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಿ. ಕೌಟುಂಬಿಕ ಸಮಾಧಾನ.
ಧನು
ನಿಮ್ಮ ಮನಸ್ಸನ್ನು ಹರ್ಷಗೊಳಿಸುವ ಬೆಳವಣಿಗೆ ಸಂಭವಿಸು ವುದು. ಆತ್ಮೀಯ ವ್ಯಕ್ತಿ ಭೇಟಿ. ಆರ್ಥಿಕ ಸುಧಾರಣೆ.
ಮಕರ
ಇತರರ ತಪ್ಪು ಹುಡುಕಬೇಡಿ.  ದುಡುಕಿನ ಮಾತು ಆಡದಿರಿ. ಹಿಂದಿನ ಕೆಲವು ಬೆಳವಣಿಗೆ ನಿಮ್ಮಲ್ಲಿ ನೆಗೆಟಿವ್ ಚಿಂತನೆ ತುಂಬಬಹುದು.
ಕುಂಭ
ಮಾನಸಿಕ ಕಿರಿಕಿರಿ.  ನಿಮ್ಮ ಅಭಿಪ್ರಾಯ ವ್ಯಕ್ತ ಮಾಡುವಾಗ ಎಚ್ಚರಿಕೆ ಇರಲಿ. ಎಲ್ಲರಿಗೂ ಅದು ಸಹ್ಯವಾಗದು. ಅವರಿಂದ ಟೀಕೆ ಕೇಳುವಿರಿ.
ಮೀನ
ಹಣದ ವಿಚಾರದಲ್ಲಿ ನೀವಿಂದು ಅದೃಷ್ಟಶಾಲಿ. ನಿಮಗೆ ಪೂರಕ ಬೆಳವಣಿಗೆ. ಅಹಿತಕರ ಆಹಾರ ಸೇವನೆ ಆರೋಗ್ಯ ಸಮಸ್ಯೆ ಉಂಟಾದೀತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!