ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಿಮ್ಮ ಪಾಲಿಗಿಂದು ನಿರುತ್ಸಾಹದ ದಿನ.  ಯೋಜಿಸಿದ ಕಾರ್ಯ ನಡೆಯದು. ಆರ್ಥಿಕ ಬಿಕ್ಕಟ್ಟು.  ಕೌಟುಂಬಿಕ ಭಿನ್ನಮತ, ವಾಗ್ವಾದ.

ವೃಷಭ
ಉದ್ದೇಶಿಸಿದ ಕಾರ್ಯ ಸಫಲತೆಗೆ ಪರಿಶ್ರಮ ಅವಶ್ಯ. ಸುಲಭದಲ್ಲಿ ಯಾವುದೂ ನಡೆಯದು. ಭಾವನೆ ನಿಯಂತ್ರಿಸಿಕೊಳ್ಳಿ.

ಮಿಥುನ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ  ನಿಮಗೆ ಅನುಕೂಲಕರ ಬೆಳವಣಿಗೆ. ಆತಂಕ ಮೂಡಿಸಿದ್ದ ವಿಷಯ ಸರಳವಾಗಿ ಪರಿಹಾರವಾಗುವುದು.

ಕಟಕ
ನಿಮ್ಮ ಕೆಲಸದಲ್ಲಿ ಏರುಪೇರು ಸಂಭವ.  ಅದರಿಂದ ವಿಚಲಿತ ಆಗದಿರಿ. ಧೈರ್ಯವಿರಲಿ. ಹೊಸ ವ್ಯವಹಾರದಲ್ಲಿ ಹೂಡಿಕೆ ಬೇಡ.

ಸಿಂಹ
ನಿಮಗಿಂದು ಪೂರಕ ದಿನ. ನಿರ್ಧಾರಗಳು ಉತ್ತಮ ಫಲ ನೀಡುವವು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು. ಆರ್ಥಿಕ ಉನ್ನತಿ, ಧನಲಾಭ.

ಕನ್ಯಾ
ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆ ಉಂಟಾದೀತು. ಅದಕ್ಕೆ ಹೊಂದಿಕೊಳ್ಳಲು ಕಲಿಯಿರಿ. ಕೌಟುಂಬಿಕ ವಾಗಿ ಭಾವುಕ ಸನ್ನಿವೇಶ.

ತುಲಾ
ಹೆಚ್ಚು ಕೆಲಸ, ಹೆಚ್ಚು ಒತ್ತಡ. ಆತ್ಮೀಯರ ಜತೆಗೆ ಸಂಬಂಧ ಕೆಡಬಹುದು. ಹಣಕ್ಕೆ ಸಂಬಂಧಿಸಿದ ವಿಚಾರ ಚಿಂತೆಗೆ ಕಾರಣವಾಗುವುದು.

ವೃಶ್ಚಿಕ
ಅಧಿಕ ಕೆಲಸವು ನಿಮ್ಮ ಮನಶ್ಯಾಂತಿ ಕದಡುವುದು. ಕೆಲವರ ವರ್ತನೆ ಕೂಡ ಅಸಹನೀಯ ಎನಿಸಲಿದೆ. ಸಹನೆಯಿಂದ ವರ್ತಿಸಿ. ಆತುರ ಸಲ್ಲದು.
ಧನು
ಗುಣಾತ್ಮಕ ಮನಸ್ಥಿತಿ ಯಿರಲಿ. ಹಿನ್ನಡೆಗಳು  ನಿಮ್ಮ ಕೆಲಸಕ್ಕೆ ಅಡ್ಡಿ ತಾರದಿರಲಿ. ಕೆಲವರ ಟೀಕೆಗಳನ್ನು ಕಡೆಗಣಿಸಿ. ಕೌಟುಂಬಿಕ ಸಹಕಾರ.
ಮಕರ
ನಿಮ್ಮನ್ನು ಕಾಡುತ್ತಿದ್ದ ಬಿಕ್ಕಟ್ಟು ಪರಿಹಾರದ ಲಕ್ಷಣ ತೋರುತ್ತಿದೆ. ನಿಮಗೆ ಒಳಿತಾಗುವ ಬೆಳವಣಿಗೆ  ಉಂಟಾಗುವುದು. ಕೌಟುಂಬಿಕ ನೆಮ್ಮದಿ.

ಕುಂಭ
ವೃತ್ತಿಯಲ್ಲಿ ಸಮಸ್ಯೆ, ಸವಾಲು ಎದುರಿಸುವಿರಿ. ಕಾರ್ಯದಲ್ಲಿ ತಪ್ಪಾದೀತು. ಪ್ರೀತಿಯ ವಿಷಯದಲ್ಲಿ ಮಾತ್ರ ನಿಮಗೆ ಹಿತಕರ ಬೆಳವಣಿಗೆ.

ಮೀನ
ಸಂಯಮದಿಂದ ಕಾರ್ಯ ನಿರ್ವಹಿಸಿ. ಇಲ್ಲವಾದರೆ ಸಮಸ್ಯೆ. ಇತರರ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸಿರಿ. ಕಡೆಗಣಿಸಬೇಡಿ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!