ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಹಲವಾರು ಕಾರ್ಯ ಪೂರೈಸಬೇಕಾದ ಒತ್ತಡ. ವಿರಾಮಕ್ಕೆ ಅವಕಾಶ ಸಿಗದು. ಕೌಟುಂಬಿಕ ಬಿಕ್ಕಟ್ಟು, ಮುನಿಸು ಉಂಟಾದೀತು.

ವೃಷಭ
ವಾದವಿವಾದ, ಮಾತಿನ ಚಕಮಕಿ ಸಂಭವ. ಹಾಗಾಗಿ ನೀವಿಂದು ಹೆಚ್ಚು ತಾಳ್ಮೆ ಪ್ರದರ್ಶಿಸಬೇಕು. ಮುಖ್ಯ ನಿರ್ಧಾರ ಇಂದು ತಾಳದಿರಿ.

ಮಿಥುನ
ನಿರೀಕ್ಷಿತ ಬದಲಾ ವಣೆಗೆ ಸಾಕ್ಷಿಯಾಗುವಿರಿ. ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿ ಮನೆಯವರ ಸಲಹೆಗೆ ಸೂಕ್ತವಾಗಿ ಸ್ಪಂದಿಸಿರಿ.

ಕಟಕ
ಕೆಲವು ಪರಿಸ್ಥಿತಿಗಳು ನಿಮ್ಮ ನಿಯಂತ್ರಣ ಮೀರಿ ಸಾಗಬಹುದು. ಪ್ರತಿ ವಿಷಯದಲ್ಲೂ ಹೆಚ್ಚಿನ ಗಮನ ಅವಶ್ಯ. ತಾಳ್ಮೆ ವಹಿಸಿ.

ಸಿಂಹ
ನಿಮ್ಮ ಪಾಲಿಗೆ ಇಂದು ಎಲ್ಲವೂ ಸುಗಮ ವಾಗಿ ಸಾಗುವುದು. ಕಾರ್ಯ ಸಿದ್ಧಿ. ಪ್ರೀತಿಯಲ್ಲಿ ಸಕಾರಾತ್ಮಕ ಬೆಳವಣಿಗೆ. ಆರೋಗ್ಯ ತೃಪ್ತಿಕರ.

ಕನ್ಯಾ
ನಿಮ್ಮ ಆಕಾಂಕ್ಷೆ ಈಡೇರುವುದು. ವಿವಾಹಾಕಾಂಕ್ಷಿಗಳಿಗೆ ಪೂರಕ ಬೆಳವಣಿಗೆ. ಶೇರು ವ್ಯವಹಾರದಲ್ಲಿ ತೊಡಗಿದವರಿಗೆ ಲಾಭ.

ತುಲಾ
ವೃತ್ತಿ, ವ್ಯವಹಾರದಲ್ಲಿ ಅದೃಷ್ಟ ನಿಮ್ಮೊಂದಿಗಿದೆ. ಆರ್ಥಿಕ ಉನ್ನತಿ. ಕೌಟುಂಬಿಕ ಸಹಕಾರ, ಭಿನ್ನಮತ ನಿವಾರಣೆ. ಸಮಸ್ಯೆ ಪರಿಹಾರ.

ವೃಶ್ಚಿಕ
ಪ್ರೀತಿಯ ವಿಷಯದಲ್ಲಿ ಸಮಸ್ಯೆಗೆ ಪರಿಹಾರ ದೊರಕುವುದು. ಸಕಾರಾತ್ಮಕ ನಡೆನುಡಿ ಅವಶ್ಯ. ವದಂತಿಗೆ ಕಿವಿಗೊಡಬೇಡಿ.

ಧನು
ಸಕಾಲದಲ್ಲಿ ಕಾರ್ಯ ಪೂರೈಸುವುದು. ಎಲ್ಲರೊಡನೆ ಉತ್ತಮ ಬಾಂಧವ್ಯ. ವೃತ್ತಿಯಲ್ಲಿ ಮೂಡಿದ್ದ ಅಸಮಾಧಾನ ನಿವಾರಣೆ. ನೆಮ್ಮದಿ.

ಮಕರ
ವೃತ್ತಿಯಲ್ಲಿ ನಿಮ್ಮ ನಿರ್ವಹಣೆ ಎಲ್ಲರ ಗಮನ ಸೆಳೆಯುವುದು. ವ್ಯಕ್ತಿಗತ ಸಮಸ್ಯೆಯೊಂದು ಸುಖಾಂತ್ಯ ಮಾನಸಿಕ ನಿರಾಳತೆ.

ಕುಂಭ
ಅತಿಯಾದ ಕೆಲಸದ ಒತ್ತಡ. ಆದರೂ ತೃಪ್ತಿಕರ ಬೆಳವಣಿಗೆ ಕಾಣಲಾರಿರಿ. ಕೌಟಂಬಿಕವಾಗಿ ಸಂವಹನದ ಕೊರತೆ.ಅಸಂತೃಪ್ತಿ ಕಾಡುವುದು.

ಮೀನ
ಭಾವನಾತ್ಮಕ ಏರುಪೇರು. ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಏಕಾಗ್ರಚಿತ್ತತೆ ಕಷ್ಟ. ಹಣದ ನಷ್ಟವೂ ಸಂಭವಿಸಬಹುದು.ವಿರಿ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!