ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್’ನಲ್ಲಿ ಬುಧವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಿರಾಶ್ರಿತ ಸಚಿವ ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಒಳಗೆ ಸ್ಫೋಟ ಸಂಭವಿಸಿದ್ದು, ನಿರಾಶ್ರಿತ ಸಚಿವ ಖಲೀಲ್ ಹಕ್ಕಾನಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಅಫ್ಘಾನಿಸ್ತಾನದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಅತ್ಯಂತ ಹೆಚ್ಚಿನ ಸಾವುನೋವು ಸಂಭವಿಸಿವೆ. ಸ್ಫೋಟದ ಹೊಣೆಯನ್ನ ತಕ್ಷಣಕ್ಕೆ ಯಾರೂ ಹೊತ್ತುಕೊಂಡಿಲ್ಲ.