ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಹಲವಾರು ಕೆಲಸದಲ್ಲಿ ಇಂದು ವ್ಯಸ್ತರಾಗುವಿರಿ. ಸುಲಭವೆಂದು ನೀವು ಭಾವಿಸಿದರೂ ಬಳಿಕ ನಿಮಗದು ಕಠಿಣವಾಗಲಿದೆ. ಆರೋಗ್ಯ ಸಮಸ್ಯೆ.

ವೃಷಭ
ನಿಮ್ಮ ಯೋಜನೆಗಳೆಲ್ಲ ಬುಡಮೇಲು. ಇದರಿಂದ ಅಸಹನೆ. ಕೌಟುಂಬಿಕ ವಿಷಯ ದಲ್ಲಿ ಸಮಾಧಾನಕರ ಬೆಳವಣಿಗೆ. ಬಂಧು ಭೇಟಿ ಸಾಧ್ಯತೆ.

ಮಿಥುನ
ಪ್ರೀತಿಯ ವಿಷಯ ನಿಮ್ಮನ್ನು ಇಂದು ಹೆಚ್ಚು ಕಾಡಲಿದೆ. ತಿನಿಸಿನ ವಿಚಾರದಲ್ಲಿ ಎಚ್ಚರವಿರಲಿ, ಅಜೀರ್ಣದಂತ ಸಮಸ್ಯೆ ಉಂಟಾದೀತು.

ಕಟಕ
ಹೆಚ್ಚು ಕ್ರಿಯಾಶೀಲ ದಿನ. ಜಡತ್ವ ಬಿಟ್ಟು ಚುರುಕಾಗಿರಿ. ಇಲ್ಲವಾದರೆ ನಿಮ್ಮ ಪ್ರತಿಸ್ಪರ್ಧಿಯಿಂದ ಹಿಂದೆ ಬೀಳುವಿರಿ. ಕೌಟುಂಬಿಕ ಸಮ್ಮಿಲನ.

ಸಿಂಹ
ಕಳೆಗುಂದಿದ ದಿನ. ಹತಾಶೆ, ಕೋಪ ಆವರಿಸಬಹುದು. ಯಾರ ಜತೆಗೂ ವಾಗ್ವಾದಕ್ಕೆ ಇಳಿಯದಿರಿ. ಆರ್ಥಿಕ ವ್ಯಯ ಹೆಚ್ಚುವುದು.

ಕನ್ಯಾ
ಪ್ರೀತಿಪಾತ್ರರ ಜತೆ ಸಮಯ ಕಳೆಯುವ ಅವಕಾಶ. ಚಿಂತೆಗೆ ಕಾರಣವಾಗಿದ್ದ ವಿಷಯವೊಂದು ಪರಿಹಾರ ಕಾಣುವುದು. ಮಾನಸಿಕ ನಿರಾಳತೆ.

ತುಲಾ
ವೃತ್ತಿ ಕ್ಷೇತ್ರದಲ್ಲಿ ಸವಾಲು ಎದುರಿಸುವಿರಿ. ಇತರರಿಂದ ಟೀಕೆ ಕೇಳುವಿರಿ. ಇದು ನಿಮ್ಮ ನಿರ್ವಹಣೆ ಮೇಲೆ ಪರಿಣಾಮ ಬೀರದಿರಲಿ. ಖರ್ಚು ಅಧಿಕ.

ವೃಶ್ಚಿಕ
ವೃತ್ತಿಯಲ್ಲಿ ನಿಮಗೆ ಪೂರಕ ಬೆಳವಣಿಗೆ. ಸ್ಪರ್ಧಿಗಳ ವಿರುದ್ಧ ಜಯ ಸಾಧಿಸುವಿರಿ. ಕೌಟುಂಬಿಕ ಪರಿಸರ ಮಾತ್ರ ಮನಸ್ಸಿನ ನೆಮ್ಮದಿ ಕದಡಬಹುದು. ಮುನಿಸು ಸಂಭವ.

ಧನು
ನೀವು ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದು ಮುಖ್ಯ.ಕಷ್ಟವೆನಿಸಿದರೂ ಅದರಿಂದಲೇ ಒಳಿತು. ವೃಥಾ ಸಂಘರ್ಷಕ್ಕೆ ಇಳಿಯದಿರಿ.

ಮಕರ
ಭಾವನಾತ್ಮಕ ದೃಢತೆ ಪ್ರದರ್ಶಿಸುವಿರಿ. ಇದರಿಂದ ಯಾವುದೇ ಪರಿಸ್ಥಿತಿ ಎದುರಿಸಲು ಶಕ್ತರಾಗುವಿರಿ. ಕುಟುಂಬದ ಜತೆ ಹೆಚ್ಚು ಸಮಯ ಕಳೆಯಿರಿ.

ಕುಂಭ
ಕೆಲಸದಿಂದ ವಿರಾಮ ಪಡೆದು ಸಂತೋಷ ಆಚರಿಸುವ ಉದ್ದೇಶ ಹೊಂದಿದ್ದರೆ ಮುಂದುವರಿಯಿರಿ. ಮೀನಮೇಷ ಬೇಡ. ಇಂದಿನದು ನಿಮ್ಮ ದಿನ.

ಮೀನ
ಪ್ರತಿಕೂಲ ಸನ್ನಿವೇಶ ಎದುರಾದೀತು. ಆದರೆ ಇಂದು ನೀವು ಯಾವುದೇ ಪರಿಸ್ಥಿತಿ ಎದುರಿಸುವ ದೃಢ ಮನಸ್ಥಿತಿ ಹೊಂದಿರುತ್ತೀರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!