November 22, 2026
Sunday, November 22, 2026
spot_img

ದಿನಭವಿಷ್ಯ: ಆಪ್ತರ, ಕುಟುಂಬದವರ ಒಡನಾಟ ನೆಮ್ಮದಿ ನೀಡಲಿದೆ, ಆರೋಗ್ಯದ ಬಗ್ಗೆ ಎಚ್ಚರ

ಮೇಷ
ಇತರರ ದೃಷ್ಟಿಕೋನ ಗೌರವಿಸಿ. ನಿಮ್ಮದೇ ಅಭಿಪ್ರಾಯ ಹೇರಬೇಡಿ. ಆತ್ಮೀಯರ ಸಂಗದಲ್ಲಿ ವೃತ್ತಿ ಒತ್ತಡ ಮರೆಯುವಿರಿ. ಆರ್ಥಿಕ ಒತ್ತಡ ಕಡಿಮೆ.
ವೃಷಭ
ನಿಮ್ಮ ಭಾವನೆ, ಮನಸ್ಥಿತಿ ಆಪ್ತರ ಜತೆ ಹಂಚಿಕೊಳ್ಳಿ. ಇದರಿಂದ ಮನಸ್ಸು ಹಗುರ. ಸುಮ್ಮನೇ ಕೊರಗುತ್ತಾ ಕೂರಬೇಡಿ.
ಮಿಥುನ
ಸಕಾಲದಲ್ಲಿ ನಿಮ್ಮ ಗುರಿ ಸಾಧಿಸುವಿರಿ. ವಿಘ್ನ ಬಾಽಸದು. ಕೌಟುಂಬಿಕ ಸಂತೃಪ್ತಿ. ವಿದ್ಯಾರ್ಥಿಗಳ ಆಶಯ ಪೂರೈಸಲಿದೆ. ಭಾವುಕ ಸನ್ನಿವೇಶ.
ಕಟಕ
ಹೆಚ್ಚುವರಿ ಹೊಣೆಗಾರಿಕೆ ಒತ್ತಡ ಸೃಷ್ಟಿಸಲಿದೆ. ದುಡುಕಿನ ನಿರ್ಧಾರ ತಾಳದಿರಿ. ಖರೀದಿಯ ಉತ್ಸಾಹಕ್ಕೆ ಕಡಿವಾಣ ಹಾಕಿ.
ಸಿಂಹ
ಮನೆಯವರ ಜತೆ ಉತ್ತಮ ಹೊಂದಾಣಿಕೆ. ಭಿನ್ನಮತ ನಿವಾರಣೆ. ವದಂತಿಗಳಿಗೆ ಹೆಚ್ಚು ಕಿವಿಗೊಡಬೇಡಿ. ನಿಮ್ಮ ಕೆಲಸ ಮಾಡುತ್ತಿರಿ.
ಕನ್ಯಾ
ಸಣ್ಣಪುಟ್ಟ ಜಗಳದಲ್ಲಿ ತೊಡಗಿಕೊಳ್ಳಬೇಡಿ. ಅದರಿಂದ ಮನಸ್ಸಿನ ನೆಮ್ಮದಿ ಹಾಳು. ವೃತ್ತಿ ಯಲ್ಲಿ ಹೊಸ ಅವಕಾಶ. ಸ್ನೇಹದಲ್ಲಿ ಬಿರುಕು.
ತುಲಾ
ಆಸ್ತಿ ಅಥವಾ ವಸ್ತು ಮಾರಾಟಕ್ಕೆ ಉದ್ದೇಶಿಸಿದ್ದರೆ ನೀವು ಇಚ್ಛಿಸಿದಂತೆ ನಡೆಯದು. ಕೌಟುಂಬಿಕ ಪರಿಸರ ಶಾಂತ. ಮಕ್ಕಳ ಸಾಧನೆಯಿಂದ ತೃಪ್ತಿ.
ವೃಶ್ಚಿಕ
ಹೊಸ ಪಾಲುದಾರಿಕೆ ಲಾಭ ತಂದೀತು. ಆದರೆ ನಂಬಿಗಸ್ಥರ ಜತೆ ವ್ಯವಹಾರ ನಡೆಸಿ. ಸಂಬಂಧದಲ್ಲಿ ಉದ್ವಿಗ್ನತೆ. ಹೊಂದಾಣಿಕೆ ಮುಖ್ಯ.
ಧನು
ನಿಶ್ಚಿತ ಸಮಯದಲ್ಲಿ ಕೆಲಸ ಪೂರೈಸಲು ವಿಫಲ. ಇದರಿಂದ ಒತ್ತಡ ಹೆಚ್ಚಳ. ಹೆಚ್ಚು ಪರಿಶ್ರಮ ಅಗತ್ಯ. ಬಂಧು ಭೇಟಿಯು ಸಮಾಧಾನ ತರಲಿದೆ.
ಮಕರ
ಸಾಧನೆಯ ದಿನ. ವ್ಯವಹಾರದಲ್ಲಿ ಸಫಲತೆ. ಕೆಲಕಾಲದಿಂದ ಕಾಡುತ್ತಿದ್ದ ಚಿಂತೆ ಪರಿಹಾರ. ಆದರೂ ಮನದಲ್ಲಿ ಬೇಗುದಿ ತಣಿಯದು.
ಕುಂಭ
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ. ವಿದ್ಯಾರ್ಥಿಗಳಿಗೆ ಯಶ. ಸಾಧನೆಯ ತೃಪ್ತಿ.
ಮೀನ
ಅಡ್ಡಿಗಳನ್ನು ನಿವಾರಿಸಿಕೊಂಡು ವಿಳಂಬವಿಲ್ಲದೆ ಕಾರ್ಯ ಎಸಗುವಿರಿ. ಆರ್ಥಿಕ ಸ್ಥಿರತೆ. ವೃತ್ತಿ ಒತ್ತಡ ನಿವಾರಣೆಯಾಗಲಿದೆ.

Must Read