ದಿನಭವಿಷ್ಯ: ಗುರುವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

ಮೇಷ
ಆಪ್ತರೊಂದಿಗೆ ಮುನಿಸು ಉಂಟಾದೀತು. ಅದರಿಂದ ನಿಮ್ಮ ಏಕಾಗ್ರತೆ ನಷ್ಟ.  ಭಾವನಾತ್ಮಕ ಏರುಪೇರು. ಸ್ವಸ್ಥ ಚಿತ್ತದಿಂದ ಆಲೋಚಿಸಿ.

ವೃಷಭ
ಈಗ ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಪರಿಹಾರ ಕಾಣಲು ಇನ್ನೂ ಒಂದೆರಡು ದಿನ ಬೇಕು. ಹಾಗಾಗಿ ತಾಳ್ಮೆ ಕಾಯ್ದುಕೊಳ್ಳಿ. ಅವಸರದ ಕ್ರಮ ಬೇಡ.

ಮಿಥುನ
ನಿಮ್ಮ ವ್ಯವಹಾರದಲ್ಲಿ  ಸೂಕ್ತ ಬದಲಾವಣೆ ಮಾಡಿಕೊಳ್ಳಿ. ಅದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಭಾವನಾತ್ಮಕ ದೃಢತೆ ಇಂದು ಪ್ರದರ್ಶಿಸುವಿರಿ.

ಕಟಕ
ಕೆಲವು ವಿಚಾರಗಳಲ್ಲಿ ಕಠಿಣ ನಿಲುವು ಬಿಟ್ಟು ಹೊಂದಾಣಿಕೆಯ ನಿಲುವು ತಳೆಯಿರಿ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಿ. ಆಪ್ತರ ಸಹಕಾರ ಲಭ್ಯ.

ಸಿಂಹ
ನಿಮ್ಮ ಉದ್ದೇಶ ಸಾಧನೆಗೆ ಸಿಗುವ ಸಣ್ಣ ಅವಕಾಶವನ್ನೂ ಕಳಕೊಳ್ಳದಿರಿ. ಬಂಧುಗಳಿಂದ ಉತ್ತಮ ಸಹಕಾರ ಲಭ್ಯ. ಆರ್ಥಿಕ ಪರಿಸ್ಥಿತಿ ಉನ್ನತಿ.

ಕನ್ಯಾ
ನಿಮಗೇನು ಬೇಕು ಎಂಬ ಕುರಿತಂತೆ ನಿಮ್ಮಲ್ಲೇ ಸ್ಪಷ್ಟತೆಯಿಲ್ಲ.ಮೊದಲು ನಿಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಿ. ಅದರಿಂದ ಗುರಿ ಸಾಧ್ಯ.

ತುಲಾ
ಇತರರಿಗೆ ನೆರವಾಗುವ ಧಾವಂತದಲ್ಲಿ ನೀವು ಕಷ್ಟಕ್ಕೆ ಸಿಲುಕದಿರಿ. ವೃತ್ತಿಯಲ್ಲಿ ಹೊಂದಾಣಿಕೆ ಅವಶ್ಯ. ನಿಮ್ಮದೇ ಅಭಿಪ್ರಾಯ ಹೇರಲು ಹೋಗಬೇಡಿ.

ವೃಶ್ಚಿಕ
ಇಂದು ಶಾಂತ ಮನಸ್ಥಿತಿ ಕಾಯ್ದುಕೊಳ್ಳಿರಿ. ಸಣ್ಣ ವಿಷಯಕ್ಕೂ ಕಟುವಾದ ಪ್ರತಿಕ್ರಿಯೆ ನೀಡಲು ಹೋಗದಿರಿ. ಭಾವೋದ್ವೇಗ ನಿಯಂತ್ರಣ ಅವಶ್ಯ.

ಧನು
ಗಂಭೀರ ಕಾರ್ಯ ಮಾಡದೆ ನಿರಾಳವಾಗಿ ಇರುವುದು ನಿಮ್ಮ ಉದ್ದೇಶ. ಆದರೆ ಕೆಲವು ಅನಿವಾರ್ಯತೆ ನಿಮ್ಮ ವಿರಾಮವನ್ನು ಕಸಿಯಬಹುದು.

ಮಕರ
ವೃತ್ತಿಯಲ್ಲಿ ಅಥವಾ ಪ್ರೀತಿಯ ವಿಷಯದಲ್ಲಿ ಹೊಂದಾಣಿಕೆಯ ವ್ಯವಹಾರ ಒಳ್ಳೆಯದು. ಸಂದರ್ಭಕ್ಕೆ ತಕ್ಕಂತೆ ನಡಕೊಳ್ಳಿ. ಕೌಟುಂಬಿಕ ಸಮಾಧಾನ.

ಕುಂಭ
ನಿಮ್ಮ ಕಾರ್ಯದಲ್ಲಿ ನಿಮಗೇ ಕಾಳಜಿಯಿಲ್ಲ. ಬೇರಾವುದೋ ವಿಷಯ ನಿಮ್ಮ ಮನ ಕೊರೆಯುತ್ತದೆ. ಮನಸ್ಸು ಸ್ವಸ್ಥ ಮಾಡಿಕೊಂಡು ಮುಂದೆ ಹೆಜ್ಜೆಯಿಡಿ.

ಮೀನ
ಅನಿರೀಕ್ಷಿತ ಸವಾಲು ಎದುರಿಸುವಿರಿ. ಅದನ್ನು ಜಾಣತನದಿಂದ ನಿಭಾಯಿಸಿ. ಇತರರ ವಿರೋಧ ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಡಿ. ಸಹನೆ ಅತ್ಯವಶ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!