ದಿನಭವಿಷ್ಯ | ಇಂದು ಮಹತ್ತರವಾದುದೇನೋ ಸಂಭವಿಸಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ಮಹತ್ವವಾದುದು ಸಂಭವಿಸಬಹುದು. ನಿಮ್ಮ ಭಾವತೀವ್ರತೆ ಯಾರ ಬಳಿಯೋ ಹಂಚಿಕೊಳ್ಳುವಿರಿ. ಮನಸ್ಸು ನಿರಾಳವಾಗುವ ಬೆಳವಣಿಗೆ.

ವೃಷಭ
ಪ್ರತೀ ಸಣ್ಣ ವಿಷಯ ವನ್ನೂ ಸರಿಯಾಗಿ ಗಮನಿಸಿ. ಅವು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಯಾವುದೇ ದುಸ್ಸಾಹಸಕ್ಕೆ ಹೋಗದಿರಿ.

ಮಿಥುನ
ಹಳೆಯದನ್ನು ಮರೆತುಬಿಡಿ, ತಪ್ಪು ಕಲ್ಪನೆ ನಿವಾರಿಸಿ. ಇದು ನೀವಿಂದು ಅನುಸರಿಸಬೇಕಾದ ವಿಧಾನ. ಅದರಿಂದ ಒಳಿತಾಗಲಿದೆ.

ಕಟಕ
ತಪ್ಪುಗ್ರಹಿಕೆಯಿಂದ ಆತ್ಮೀಯ ಸಂಬಂಧ ಹಾಳಾಗಬಹುದು. ಆದಕ್ಕೆ ಆಸ್ಪದ ನೀಡದಿರಿ. ಮುಕ್ತ ಮಾತುಕತೆ ಇದಕ್ಕೆ ಪರಿಹಾರ. ಆರ್ಥಿಕ ಒತ್ತಡ ಹೆಚ್ಚು.

ಸಿಂಹ
ವೃತ್ತಿಯಲ್ಲಿ ಸಂಘರ್ಷಕ್ಕೆ ಹೋಗದಿರಿ. ಅದರಿಂದ ನಿಮಗೇ ಅನನುಕೂಲ. ಮನೆಯಲ್ಲೂ ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ. ಸಹನೆ ಇಂದು ಅತೀ ಅವಶ್ಯ.

ಕನ್ಯಾ
ವೃತ್ತಿಗೆ ಸಂಬಂಧಿಸಿ ಇಂದು ಮಹತ್ವದ ಬೆಳವಣಿಗೆ ಸಂಭವ. ನಿಮಗೆ ಅನುಕೂಲ ಪರಿಸ್ಥಿತಿ ಏರ್ಪಡುವುದು. ಆರ್ಥಿಕ ಲಾಭ.

ತುಲಾ
ಹಲವಾರು ಬಗೆಯ ಒತ್ತಡಗಳು. ಕೆಲವರ ವರ್ತನೆ ಅಸಹನೀಯ. ಕುಟುಂಬಸ್ಥರ ಜತೆ ಕಾಲ ಕಳೆಯಿರಿ. ಅವರ ಸಂಗದಲ್ಲಿ ಒತ್ತಡ ನಿವಾರಣೆ.

ವೃಶ್ಚಿಕ
ಮನೆಯಲ್ಲೂ , ಉದ್ಯೋಗದಲ್ಲೂ ಅತಿಯಾದ ಒತ್ತಡ. ಹಲವಾರು ಕೆಲಸ ಒಮ್ಮೆಗೆ ಮೈಮೇಲೆ ಬೀಳುವುದು. ಸಹನೆಯಿಂದ ನಿಭಾಯಿಸಿರಿ.

ಧನು
ಉದ್ಯೋಗದಲ್ಲಿ ಅಧಿಕ ಒತ್ತಡ. ಆದರೂ ಸಮಯಮಿತಿಯಲ್ಲಿ ಕೆಲಸ ಪೂರೈಸಿ ಸಂತುಷ್ಟರಾಗುವಿರಿ. ಆದರೆ ಕೌಟುಂಬಿಕ ಒತ್ತಡ ಅಸಹನೀಯ.

ಮಕರ
ಕೆಲವು ಪ್ರಮುಖ ವಿಷಯಗಳಲ್ಲಿ ಅಜ್ಞಾನಿಯಾಗದಿರಿ. ಅದು ನಿಮಗೆ ಪ್ರತಿಕೂಲ ಆದೀತು.  ಎಲ್ಲ ವಿಷಯ ತಿಳಿದುಕೊಳ್ಳುವುದು ಅವಶ್ಯ.

ಕುಂಭ
ಇತರರು ಸೃಷ್ಟಿಸಿದ ಸಮಸ್ಯೆಯಲ್ಲಿ ನೀವು ಸಿಕ್ಕಿಬೀಳುವ ಸಂಭವ. ನಿಮ್ಮದೇ ಪ್ರಯತ್ನದಿಂದ ಅದನ್ನು ನಿಭಾಯಿಸಲು ಶಕ್ತರಾಗುವಿರಿ. ಕೆಲವರ ಸಂಗ ಒಳಿತು ತಾರದು.

ಮೀನ
ಕೆಲವರದ್ದು ತೋರಿಕೆಯ ಸ್ನೇಹ ಎಂಬ ಅರಿವು ನಿಮಗೆ ಆಗಲಿದೆ. ಅವರ ಮುಖವಾಡ ಕಳಚಲಿದೆ. ಇದರಿಂದ ಖಿನ್ನರಾಗದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!