Wednesday, October 5, 2022

Latest Posts

ಬ್ರಿಟೀಷರಿಗೆ ದುಸ್ವಪ್ನದಂತೆ ಕಾಡುತ್ತಿದ್ದರು ಗಿರಿಜಾಶಂಕರ್ ಮಿಶ್ರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗಿರಿಜಾಶಂಕರ್ ಮಿಶ್ರಾ ಅವರು 1887ರ ಜೂನ್ 7 ರಂದು ರಾಯಪುರದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಪಂಡಿತ್ ವಂಶ ಗೋಪಾಲ್ ಮಿಶ್ರಾ, ಮತ್ತು ತಾಯಿ ಶ್ರೀಮತಿ ರಾಮರಟ್ಟಿ. ಮೆಟ್ರಿಕ್ಯುಲೇಷನ್ ಮುಗಿಸಿದ ನಂತರ ತಂದೆಯೊಂದಿಗೆ ಪೌರೋಹಿತ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಅವರು ಸಹ ಸ್ವಾತಂತ್ರ್ಯ ಹೋರಾಟಗಾರರಾದ ಮೌಲಾನಾ ರವೂಫ್, ಧನಿರಾಮ್ ವರ್ಮಾ, ಪ್ರೇಮಚಂದ್ ಮೊದಲಾದವರ ಜೊತೆಗೆ ರಾಷ್ಟ್ರೀಯ ಚಳವಳಿಗಳ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು.
ಅವರು ಸತ್ಯಾಗ್ರಹಿಗಳ ಒಂದು ವಾರದ ತರಬೇತಿಯಲ್ಲಿ ಭಾಗವಹಿಸುವ ಮೂಲಕ ತರಬೇತಿ ಪಡೆದ ಸತ್ಯಾಗ್ರಹಿಯಾದರು. 1941 ರ ವೈಯಕ್ತಿಕ ಸತ್ಯಾಗ್ರಹದ ಎರಡನೇ ಹಂತದಲ್ಲಿ, ಯುದ್ಧ ವಿರೋಧಿ ಭಾಷಣಗಳನ್ನು ಮಾಡಿದ್ದಕ್ಕಾಗಿ ಮತ್ತು ಬ್ರಿಟೀಷರ ವಿರುದ್ಧ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಅವರನ್ನು ಶಿಕ್ಷಿಸಲಾಯಿತು. 9 ಆಗಸ್ಟ್ 1942 ರಂದು ಗಾಂಧೀಜಿಯ ಬಂಧನದ ನಂತರ, ಅವರು ರಾಯ್ಪುರದಲ್ಲಿ ಉಗ್ರ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಇಲ್ಲಿ ಮಿಶ್ರಾ ಅವರು ಗಾಂಧೀಜಿಯವರ ಬಂಧನಕ್ಕೆ ಸರ್ಕಾರವನ್ನು ಟೀಕಿಸಿದರು. ಬ್ರಿಟಿಷ್ ಆಳ್ವಿಕೆಯ ಯುದ್ಧ-ವಿರೋಧಿ ಮತ್ತು ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ ಭಾಷಣಗಳನ್ನು ನೀಡಿದ್ದಕ್ಕಾಗಿ ಅವರನ್ನು ಬಂಧಿಸಿ ಆರು ತಿಂಗಳ ಶಿಕ್ಷೆ ವಿಧಿಸಲಾಯಿತು. ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ, ಅವರು ಕ್ರಾಂತಿಕಾರಿ ಒಡನಾಡಿಗಳಿಗೆ ಸಹಾಯ ಮಾಡಿದರು ಮತ್ತು ಮನೆಯಲ್ಲಿ ಸ್ಫೋಟಕಗಳನ್ನು ಇರಿಸಿಕೊಂಡಿದ್ದರು. ಹೀಗಾಗಿ ಪೊಲೀಸರು ಅವರ ಮನೆಯನ್ನು ಹಲವು ಬಾರಿ ಶೋಧಿಸಿದ್ದರು. ಪೊಲೀಸರು ಮಿಶ್ರಾ  ಸ್ನೇಹಿತನಿಗೆ ಮಾರಣಾಂತಿಕವಾಗಿ ಹೊಡೆದು ಅಂಡಮಾನ್ ದ್ವೀಪದ ಜೈಲಿಗೆ ಕಳುಹಿಸಿದರು. ಸ್ನೇಹಿತನನ್ನು ಜೈಲಿನಿಂದ ಬಿಡುಗಡೆ ಮಾಡಲು ಮಿಶ್ರ ಕೆಲಕಾಲ ಅಂಡಮಾನ್‌ನಲ್ಲಿ ತಂಗಿದ್ದರು. ಆ ವೇಳೆ ಸಮುದ್ರದಲ್ಲಿ ಈಜಿಕೊಂಡು ಸಹಚರನೊಂದಿಗೆ ಪರಾರಿತಯಾಗುವ ಪ್ರಯತ್ನ ನಡೆಸಿದ್ದರು. ಇದಾದ ಬಳಿಕ ಮಿಶ್ರಾ ಗೋವಾ ವಿಮೋಚನಾ ದಳ ಸೇರುವ ಮೂಲಕ ಗೋವಾಕ್ಕೆ ಸ್ವಾತಂತ್ರ್ಯಕ್ಕೆ ಹೋರಾಡಿದರು.
ಅವರು 8 ಜೂನ್ 1972 ರಂದು ನಿಧನರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!