ದಿನ ಭವಿಷ್ಯ | ಪ್ರತಿ ವಿಚಾರ ಯೋಚಿಸಿ ಮುನ್ನಡೆಯಿರಿ, ಇಲ್ಲವಾದಲ್ಲಿ ಗೊಂದಲ, ಬಿಕ್ಕಟ್ಟು ಎದುರಿಸಬೇಕಾದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಕೆರಿಯರ್‌ನಲ್ಲಿ ಉನ್ನತಿ. ಘನತೆ ಹೆಚ್ಚಳ. ಖಾಸಗಿ ಗುರಿ ಸಾಧನೆ. ಇಂದು ಯಾವುದೇ ಕಾರ್ಯ ಕೈಗೊಂಡರೂ ನಿಮಗೆ ಸಫಲತೆ ದೊರಕುವುದು. ಆರ್ಥಿಕ ಸುಧಾರಣೆ.

ವೃಷಭ
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಪ್ರಗತಿ.ಪ್ರೀತಿಯ ವಿಷಯದಲ್ಲಿ ನಿಮಗೆ ಪೂರಕ ಬೆಳವಣಿಗೆ. ಹಣ ಉಳಿತಾಯಕ್ಕೆ ಯೋಜನೆ ರೂಪಿಸಿರಿ.

ಮಿಥುನ
ಪ್ರತಿ ವಿಷಯವನ್ನೂ ಯೋಜಿಸಿ ನಡೆಸಿರಿ.ಇಲ್ಲವಾದರೆ ಗೊಂದಲ, ಬಿಕ್ಕಟ್ಟು ಸೃಷ್ಟಿಯಾದೀತು.ಇತರರ ಸಲಹೆ ಕುರುಡಾಗಿ ಪಾಲಿಸದಿರಿ. ನಿಮ್ಮಲ್ಲೇ ವಿವೇಚಿಸಿ.

ಕಟಕ
ಎಲ್ಲರೊಂದಿಗೆ ಸಹಕಾರದಿಂದ ವರ್ತಿಸುವಿರಿ.ಇದು ನಿಮ್ಮ ಕಾರ್ಯ ಸುಲಭದಲ್ಲಿ ಸಾಧಿಸಲು ನೆರವಾಗುವುದು.ಆರ್ಥಿಕ ಉನ್ನತಿ.

ಸಿಂಹ
ನಿಮ್ಮ ಸುತ್ತಲಿನ ಪರಿಸ್ಥಿತಿ ಯನ್ನು ಅವಲೋಕಿಸಿ ನಿಮ್ಮ ಕಾರ್ಯದಲ್ಲಿ ಅವಶ್ಯ ಬದಲಾವಣೆ ಮಾಡಿ. ಕೆಲವು ಪರಿಸ್ಥಿತಿ ನಿಮಗೆ ಪೂರಕ ಆಗದಿರಲೂ ಬಹುದು.

ಕನ್ಯಾ
ವೃತ್ತಿ ಕ್ಷೇತ್ರದಲ್ಲಿ ಸಹಕಾರದ ಕೊರತೆ. ನಿಮಗೆ ಕೇಡೆಣಿಸಲು ಕೆಲವರ ಯತ್ನ.ಆದರೆ ನಿಮ್ಮ ಗುರಿ ಸಾಧನೆಗೆ ಯಾವುದೂ ಇಂದು ಅಡ್ಡ ಬರಲಾರದು.

ತುಲಾ
ನಿಮ್ಮ ಕಾರ್ಯ ಸಾಫಲ್ಯವು  ಉತ್ತಮ ಪ್ರತಿಫಲ ನೀಡುವುದು. ಪ್ರೀತಿಪಾತ್ರರಲ್ಲಿ ನಿಮ್ಮ ಭಾವನೆಯನ್ನು ಅರುಹಲು ಹಿಂಜರಿಕೆ ತೋರದಿರಿ.

ವೃಶ್ಚಿಕ
ನಿಮ್ಮ ಕೆಲಸದಲ್ಲಿ, ಭಾವನೆ ವ್ಯಕ್ತಪಡಿಸುವಲ್ಲಿ ಪ್ರಾಮಾಣಿಕರಾಗಿರಿ. ಅದುವೇ ನಿಮಗೆ ಉತ್ತಮ ಫಲ ನೀಡುವುದು. ವಂಚನೆಯ ಹಾದಿ ಬೇಡ.

ಧನು
ನಿಮ್ಮ ಪ್ರಾಮಾಣಿಕ ಅಭಿವ್ಯಕ್ತಿಯು ನಿಮಗೆ ಅಭಿಮಾನಿಗಳನ್ನು ಸೃಷ್ಟಿಸಲಿದೆ. ನಿಮ್ಮ ವಿರೋಧಿಗಳು ಅಸಹಾಯಕ ಆಗುತ್ತಾರೆ.

ಮಕರ
ಸಂಬಂಧವೊಂದು ಜಟಿಲಗೊಂಡಂತೆ ಕಂಡರೂ ನಿಜವಾಗಿ ಮತ್ತಷ್ಟು ಗಟ್ಟಿಗೊಳ್ಳಲಿದೆ. ಮುಕ್ತ ಮಾತುಕತೆ ಒಳಿತು. ಭಿನ್ನಮತ ಪರಿಹಾರ.

ಕುಂಭ
ಬೆಳಗಿನ ಹೊತ್ತು ಬೇಸರದ ಮನಸ್ಥಿತಿ. ಕೆಲಸದಲ್ಲಿ ಏಕಾಗ್ರತೆ ನಾಶ. ಆದರೆ ಬಳಿಕ ನೀವು ಉಲ್ಲಸಿತರಾಗುವ ಬೆಳವಣಿಗೆ ಸಂಭವಿಸುವುದು.

ಮೀನ
ನಿಮ್ಮ ಸಂತೋಷ ಹೆಚ್ಚಿ ಸುವಂತಹ ಬೆಳವಣಿಗೆ. ಆರ್ಥಿಕ ಪರಿಸ್ಥಿತಿ ಸದೃಢ. ಉಳಿತಾಯ ಹೆಚ್ಚಳ. ಸರಿಯಾದ ಸಮಯಕ್ಕೆ ಆಹಾರ ಸೇವಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!