ಕೇರಳದಲ್ಲಿ ಸ್ವಾತಂತ್ರ್ಯ ಚಳುವಳಿ ಪ್ರಜ್ವಲಿಸುವಂತೆ ಮಾಡಿದ್ದರು ಜಾರ್ಜ್ ಜೋಸೆಫ್, ಅಚ್ಯುತನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಾರ್ಜ್ ಜೋಸೆಫ್ ಅವರು 1923 ರಲ್ಲಿ ಕೊಟ್ಟಾಯಂ ಜಿಲ್ಲೆಯ ಪಲೈನಲ್ಲಿ ಜನಿಸಿದರು. ಕಾಲೇಜು ದಿನಗಳಲ್ಲೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಅವರು ಕೊಟ್ಟಾಯಂನಲ್ಲಿ ಕಾಂಗ್ರೆಸ್ನ ವಿದ್ಯಾರ್ಥಿ ಘಟಕವನ್ನು ಸಂಘಟಿಸಿದರು. ಅವರು ತಿರುವಾಂಕೂರು ರಾಜ್ಯ ಕಾಂಗ್ರೆಸ್‌ನ ಪ್ರಬಲ ಸದಸ್ಯರಾಗಿದ್ದರು ಮತ್ತು ಪಲೈನಲ್ಲಿ ಅನೇಕ ಆಂದೋಲನಗಳನ್ನು ಆಯೋಜಿಸಿದರು. ಅವರ ಹೋರಾಟಗಳಿಗೆ ಬ್ರಿಟಿಷರಿಂದ ತಡೆಯುಂಟಾದಾಗ, ತಮ್ಮ ಚಟುವಟಿಕೆಗಳನ್ನು ಎರ್ನಾಕುಲಂಗೆ ವರ್ಗಾಯಿಸಿದರು ಮತ್ತು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಹಲವು ಆಂದೋಲನಗಳನ್ನು ಪ್ರಾರಂಭಿಸಿದರು. ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿ, ಅವರು ಖಾದಿ ಚಳುವಳಿಯ ಪ್ರಚಾರದಲ್ಲಿ ಭಾಗವಹಿಸಿದರು ಮತ್ತು ವಿದೇಶಿ ಬಟ್ಟೆ ಮತ್ತು ವಿದೇಶಿ ಮದ್ಯವನ್ನು ಮಾರಾಟ ಮಾಡುವ ಅಂಗಡಿಗಳ ಪಿಕೆಟಿಂಗ್‌ನಲ್ಲಿ ತೊಡಗಿದ್ದರು.

ಹಲವು ರಾಷ್ಟ್ರೀಯ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು ಅಚ್ಯುತನ್:
ಅಚ್ಯುತನ್ ಕಿಡವ್ ಎಡಕ್ಕಂಡಿಯಿಲ್ ಅವರು 1907 ರಲ್ಲಿ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬಲುಶ್ಶೇರಿಯಲ್ಲಿ ಜನಿಸಿದರು. ಅವರು ಬಾಲ್ಯದಲ್ಲಿಯೇ ರಾಷ್ಟ್ರೀಯ ಚಳವಳಿಯತ್ತ ಆಕರ್ಷಿತರಾದರು ಮತ್ತು 1929 ರಿಂದ ಅವರು ಗಾಂಧೀಜಿ ಸೂಚಿಸಿದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅವರು ಖಾದಿ ಮತ್ತು ಚರಕಾ ಬಳಕೆಯನ್ನು ಉತ್ತೇಜಿಸಲು ಹಳ್ಳಿಹಳ್ಳಿಗಳಲ್ಲಿ ಪ್ರಚಾರ ಮಾಡಿದರು. ಮತ್ತು ಮದ್ಯ ನಿಷೇಧದ ಪ್ರಚಾರಕ್ಕಾಗಿ ಕೆಲಸ ಮಾಡಿದರು. ಜನವರಿ 1931 ರಲ್ಲಿ ಕೋಝಿಕ್ಕೋಡ್‌ನಲ್ಲಿ ವಿದೇಶಿ ಅಂಗಡಿಯೊಂದರಲ್ಲಿ ಪಿಕೆಟಿಂಗ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಿದ ಪೊಲೀಸರು ಅವರನ್ನು ಕ್ರೂರವಾಗಿ ಥಳಿಸಿದರು. ಅವರನ್ನು 21 ದಿನಗಳ ಕಾಲ ಜೈಲಿನಲ್ಲಿರಿಸಲಾಯಿತು. ಜೈಲಿಂದ ಬಿಡುಗಡೆಯಾದ್‌ ಬಳಿಕ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು ಮತ್ತು ಆರು ತಿಂಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾದರು. ಅವರು 1967 ರಲ್ಲಿ ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!