ಮೇಷ.
ನಿಮಗಿಂತ ಕಡಿಮೆ ಸಮರ್ಥರಿಗೆ ಮನ್ನಣೆ ಸಿಗುವುದು ಅಸಂತೃಪ್ತಿ ಸೃಷ್ಟಿಸೀತು. ನಿಮ್ಮ ಕೆಲಸದ ಬಗ್ಗೆ ಸಂತೃಪ್ತಿ ಇರಲಿ. ಅದೇ ಮನಸಿನ ನೆಮ್ಮದಿಗೆ ದಾರಿ.
ವೃಷಭ
ಮಾತಿನಲ್ಲಿ ಹದವಿರಲಿ. ವಾಗ್ವಾದ ನಡೆಸದಿರಿ. ವೃತ್ತಿಯ ಒತ್ತಡ ಮನೆಯ ನೆಮ್ಮದಿ ಹಾಳು ಮಾಡದಿರಲಿ. ಸ್ವಾಸ್ಥ್ಯದ ಕಾಳಜಿ ವಹಿಸಿರಿ.
ಮಿಥುನ
ಆಪ್ತರ ಕೆಲವು ಮಾತಿನಿಂದ ನೋವು ಉಂಟಾದೀತು.ಅರಿತು ವ್ಯವಹರಿಸಿ. ಆಹಾರದಲ್ಲಿ ಪಥ್ಯ ಕಾಯ್ದುಕೊಳ್ಳಿ. ವೈದ್ಯಕೀಯ ಖರ್ಚು.
ಕಟಕ
ನಿಮ್ಮ ಕೆಲಸಕ್ಕೆ ಅಡ್ಡಿ ಬರಲಿದೆ. ಮಾನಸಿಕ ದೃಢತೆ ಅವಶ್ಯ. ಸಣ್ಣ ಹಿನ್ನಡೆಗೆ ಹಿಂಜರಿಯದಿರಿ. ಅನವಶ್ಯ ವಾಗ್ವಾದದಲ್ಲಿ ಒಳಗೊಳ್ಳದಿರಿ.
ಸಿಂಹ
ಹಳೆ ಹೂಡಿಕೆಯ ಲಾಭ ಸಿಗಲಿದೆ. ಆರ್ಥಿಕ ಸುಸ್ಥಿರತೆ. ವ್ಯವಹಾರದಲ್ಲಿ ಪೈಪೋಟಿ ಎದುರಾದೀತು. ಆರೋಗ್ಯದಲ್ಲಿ ಲಘು ಸಮಸ್ಯೆ ಕಾಣಿಸಬಹುದು.
ಕನ್ಯಾ
ಕೆಲಸದಲ್ಲಿ ತಪ್ಪು ಘಟಿಸಬಹುದು. ನೆಗೆಟಿವ್ ಚಿಂತನೆ ಮನದಿಂದ ಹೊಡೆದೋಡಿಸಿ. ಇಷ್ಟದೇವರ ಪ್ರಾರ್ಥನೆ ಎಲ್ಲ ಸರಿಯಾಗಿಸಲಿದೆ.
ತುಲಾ
ಸಮಸ್ಯೆಗೆ ಪರಿಹಾರ ಕಾಣುವ ಸಂಕೇತ ತೋರುತ್ತಿದೆ.ಕೆಲ ಸಮಯದ ಬೇಗುದಿ ಕಡಿಮೆ ಆದೀತು. ಕೌಟುಂಬಿಕ ಸಮಾಧಾನ.
ವೃಶ್ಚಿಕ
ಅತಿಯಾದ ಭಾವುಕ ಪ್ರಸಂಗ ಎದುರಿಸುವಿರಿ. ಮನಸ್ಸಿಗೆ ನೋವು. ಧೋರಣೆ ಪ್ರಾಕ್ಟಿಕಲ್ ಆಗಿರಲಿ. ಆರ್ಥಿಕ ಉನ್ನತಿಗೆ ತುಸು ಅಡ್ಡಿ.
ಧನು
ಉದ್ದೇಶಿತ ವ್ಯವಹಾರದಲ್ಲಿ ಯಶಸ್ಸಿನ ಸಂಕೇತ ತೋರುತ್ತಿದೆ. ವ್ಯಾಜ್ಯದಲ್ಲಿ ಪೂರಕ ಬೆಳವಣಿಗೆ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ.
ಮಕರ
ನಿಮ್ಮ ಆದ್ಯತೆ ಅರಿತು ವ್ಯವಹರಿಸಿ. ಕ್ಷುಲ್ಲಕ ವಿಷಯದಲ್ಲಿ ಶಕ್ತಿಹರಣ ಮಾಡದಿರಿ. ಖಾಸಗಿ ಸಮಸ್ಯೆಗೆ ಪರಿಹಾರ. ಮಾನಸಿಕ ನಿರಾಳತೆ.
ಕುಂಭ
ಅಲರ್ಜಿ, ನೆಗಡಿ ಸಮಸ್ಯೆಗೆ ತುತ್ತಾಗದಂತೆ ಎಚ್ಚರ ವಹಿಸಿ. ವ್ಯವಹಾರ ದಲ್ಲಿ ಅತಿವಿಶ್ವಾಸ ಪ್ರತಿಕೂಲವೂ ಆದೀತು. ಎಚ್ಚರಿಕೆಯಲ್ಲಿ ಇರಬೇಕು.
ಮೀನ
ಸುಗಮ ದಿನ. ವ್ಯವಹಾರದಲ್ಲಿ ಸ-ಲತೆ. ಅನಿರೀಕ್ಷಿತ ಧನ ಪ್ರಾಪ್ತಿ. ಹಿರಿಯರು ಪಥ್ಯದಲ್ಲಿ ಎಚ್ಚರ ವಹಿಸಿ. ಹೊಟ್ಟೆ ಕೆಡದಂತೆ ನೋಡಿಕೊಳ್ಳಿ.



