October 30, 2026
Friday, October 30, 2026
spot_img

ದಿನಭವಿಷ್ಯ: ಬೇಸರ ಕಳೆದು ಸುಂದರ ಬೆಳವಣಿಗೆಗಳು ಜರುಗಲಿದೆ, ಆರ್ಥಿಕ ನಿರ್ಧಾರ ಕೈಹಿಡಿಯಲಿವೆ

ಮೇಷ.
ಈ ದಿನ ನಿಮಗೆ ಕೆಲ ಎಡರುತೊಡರುಗಳು ಬಾಧಿಸಲಿವೆ. ಅಸಹನೆ ಹೆಚ್ಚು. ಹಣದ ವ್ಯವಹಾರ ದಲ್ಲಿ ಹೆಚ್ಚು ಎಚ್ಚರವಿರಲಿ. ದೈಹಿಕ ನೋವು ಸಂಭವ.
ವೃಷಭ
ಹೆಚ್ಚು ಫಲ ನೀಡದ ದಿನ. ಜಡತ್ವವೂ ನಿಮ್ಮನ್ನು ಕಾಡಲಿದೆ. ಮಹತ್ವದ ನಿರ್ಧಾರ ತಾಳದಿರಿ. ಆತ್ಮೀಯರ ಜತೆ ಭಿನ್ನಮತ ಉಂಟಾದೀತು.
ಮಿಥುನ
ಅಽಕ ಕೆಲಸ. ಫಲ ಮಾತ್ರ ನಿರೀಕ್ಷೆಗೆ ತಕ್ಕಷ್ಟು ಇರದು. ಸಹನೆ ಕೆಡುವ ಪರಿಸ್ಥಿತಿ, ಇದರಿಂದ ಸಂಬಂಧದಲ್ಲೂ ಒಡಕು. ಹಣದ ಹರಿವು ಸೀಮಿತ.
ಕಟಕ
ಹೆಚ್ಚಿನ ವಿಶೇಷ ಘಟಿಸದ ದಿನ. ವೃತ್ತಿ ಸಂಬಂಧ ಪ್ರಯಾಣ. ಏಕಾಂಗಿಗಳಿಗೆ ಸಂಗಾತಿ ದೊರಕಬಹುದು. ಅನಿರೀಕ್ಷಿತ ಧನಪ್ರಾಪ್ತಿ.
ಸಿಂಹ
ನಿಮ್ಮ ಬೇಸರ ಕಳೆಯುವಂತಹ ಬೆಳವಣಿಗೆ. ವೃತ್ತಿಯಲ್ಲಿ ಯಶಸ್ಸು. ಆರ್ಥಿಕವಾಗಿ ತೆಗೆದುಕೊಳ್ಳುವ ನಿರ್ಧಾರ ಫಲ ನೀಡಲಿದೆ.
ಕನ್ಯಾ
ವೃತ್ತಿಯಲ್ಲಿ ಕೆಲವು ಸವಾಲು ಎದುರಿಸುವಿರಿ. ಒತ್ತಡ ಅಧಿಕ. ಪ್ರಗತಿಗೆ ಅಡ್ಡಗಾಲು. ಹೊಸ ವ್ಯವಹಾರಕ್ಕೆ ಹಣ ಹಾಕಲು ಹೋಗಬೇಡಿ.
ತುಲಾ
ಕೆಲವಾರು ಬಗೆಯ ಒತ್ತಡ ಎದುರಿಸುವಿರಿ. ಆದಾಯ ಹೆಚ್ಚಳದ ಜತೆ ಖರ್ಚೂ ಅಽಕ. ತಲೆನೋವು, ಉದರಸಂಬಂಧ ಅಸೌಖ್ಯ.
ವೃಶ್ಚಿಕ
ಅಮೂಲ್ಯ ವಸ್ತು ಸುರಕ್ಷಿತವಾಗಿಡಿ. ಕಳವು ಅಥವಾ ಕಳೆದುಹೋಗುವ ಸಂಭವವಿದೆ. ಅಜೀರ್ಣ ಸಮಸ್ಯೆ ಉಂಟಾದೀತು. ಮಿತಾಹಾರ ಒಳಿತು.
ಧನು
ಕೆಲಸದ ಒತ್ತಡದಿಂದ ಮುಕ್ತಿ. ಹಾಗಾಗಿ ನಿರಾಳವಾಗಿ ಚಿಂತಿಸಲು ಸಮಯ ಸಿಗಲಿದೆ. ನನೆಗುದಿಯಲ್ಲಿ ಇಟ್ಟಿರುವ ಸಮಸ್ಯೆ ಪರಿಹರಿಸಿ.
ಮಕರ
ಇಂದು ಸಾಧಾರಣ ಯಶ. ಸಕಾಲದಲ್ಲಿ ಕೆಲಸ ಮುಗಿಯದು. ಪ್ರಮುಖ ಹಣಕಾಸು ನಿರ್ಧಾರ ತಾಳಲು ಸೂಕ್ತ ದಿನವಲ್ಲ. ಕೌಟುಂಬಿಕ ವಾಗ್ವಾದ.
ಕುಂಭ
ಸಂತೋಷದ ದಿನ. ವೃತ್ತಿಯಲ್ಲಿ ಇತರರ ಶ್ಲಾಘನೆ. ಆರ್ಥಿಕ ಸಂಕಷ್ಟ ನಿವಾರಣೆ. ಬಂಧುವಿನಿಂದ ಶುಭ ಸುದ್ದಿ. ಸಂಗಾತಿ ಜತೆ ಉತ್ತಮ ಹೊಂದಾಣಿಕೆ.
ಮೀನ
ಯಶಸ್ವಿ ದಿನವಲ್ಲ. ಗೊಂದಲದ ಮನಸ್ಥಿತಿ. ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗದು. ಧನಹಾನಿ ಸಂಭವ. ಬಂಧುಗಳ ವಿರೋಧ ಉಂಟಾದೀತು.

Must Read