October 29, 2026
Thursday, October 29, 2026
spot_img

ಬೆಳ್ಳಿಪರದೆಗೆ ಬರಲಿದೆ ತಮಿಳುನಾಡು ರಾಜಕೀಯ ಇತಿಹಾಸ: ಜಯಲಲಿತಾ ಪಾತ್ರಕ್ಕೆ ತ್ರಿಷಾ ಆಯ್ಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟಿ ತ್ರಿಷಾ ಕೃಷ್ಣನ್ ಅವರು ಈಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ನಟ ಎಂ.ಜಿ. ರಾಮಚಂದ್ರನ್ (MGR) ಅವರ ಜೀವನಾಧಾರಿತ ಚಿತ್ರದಲ್ಲಿ ಈ ಪವರ್‌ಫುಲ್ ಪಾತ್ರಕ್ಕಾಗಿ ಚಿತ್ರತಂಡವು ತ್ರಿಷಾ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

‘ಪುರಚಿ ತಲೈವರ್ ಎಂಜಿಆರ್’ ಬಯೋಪಿಕ್

ತಮಿಳುನಾಡು ರಾಜಕೀಯ ಮತ್ತು ಚಿತ್ರರಂಗದ ಕಣ್ಮಣಿ ಎಂಜಿಆರ್ ಅವರ ಸಿನಿಮಾ ಪಯಣ ಹಾಗೂ ರಾಜಕೀಯ ಜೀವನದ ಏಳುಬೀಳುಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ.  ಎಂಜಿಆರ್ ಅವರ ವೈಯಕ್ತಿಕ ಹಾಗೂ ರಾಜಕೀಯ ಬದುಕಿನಲ್ಲಿ ಜಯಲಲಿತಾ ಅವರದ್ದು ಬಹುಮುಖ್ಯ ಪಾತ್ರ. ಬೆಳ್ಳಿಪರದೆ ಹಾಗೂ ರಾಜಕೀಯ ರಂಗದಲ್ಲಿ ದೇಶದ ಅತ್ಯಂತ ಪ್ರಭಾವಿ ನಾಯಕಿಯಾಗಿ ಬೆಳೆದ ಜಯಲಲಿತಾ ಅವರ ವಿವಿಧ ಘಟ್ಟಗಳನ್ನು ತಲುಪಿಸುವ ಸವಾಲಿನ ಪಾತ್ರ ಇದಾಗಿದೆ.

ಚಿತ್ರದಲ್ಲಿ ಸಿ.ಎನ್. ಅಣ್ಣಾದೊರೈ ಹಾಗೂ ಎಂ. ಕರುಣಾನಿಧಿ ಅವರಂತಹ ಪ್ರಮುಖ ತಮಿಳು ರಾಜಕೀಯ ನಾಯಕರ ಪಾತ್ರಗಳೂ ಇರಲಿವೆ. ಜೆ.ಎಂ. ಬಷೀರ್ ಅವರು ಈ ಚಿತ್ರದಲ್ಲಿ ಎಂಜಿಆರ್ ಪಾತ್ರವನ್ನು ಪೋಷಿಸುತ್ತಿದ್ದು, ಶೀಘ್ರದಲ್ಲೇ ಚೆನ್ನೈನಲ್ಲಿ ಶೂಟಿಂಗ್ ಆರಂಭವಾಗಲಿದೆ.

ಇದನ್ನೂ ಓದಿ:

ಚಿತ್ರದ ಪಾತ್ರವರ್ಗದ ಕುರಿತು ಚಿತ್ರತಂಡದಿಂದ ಇನ್ನು ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಸದ್ಯ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಭಾರೀ ಬೇಡಿಕೆಯಲ್ಲಿರುವ ತ್ರಿಷಾ ಅವರು ಈ ಸವಾಲಿನ ಪಾತ್ರಕ್ಕೆ ಒಪ್ಪಿಗೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Must Read