November 20, 2026
Friday, November 20, 2026
spot_img

ದಿನಭವಿಷ್ಯ: ದೌರ್ಬಲ್ಯಗಳನ್ನು ತಿದ್ದಿಕೊಳ್ಳುವುದು ಅಗತ್ಯ, ಹಣಕಾಸಿನ ತೊಂದರೆಗಳಿಗೆ ಪರಿಹಾರ ಸಿಗಲಿದೆ

ಮೇಷ
ಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ. ವ್ಯವಹಾರದಲ್ಲೂ ಒತ್ತಡ ಅಧಿಕ. ಎರಡನ್ನೂ ಸರಿಯಾಗಿ ನಿಭಾಯಿಸಲು ಸಮರ್ಥರಾಗುವಿರಿ.
ವೃಷಭ
ನಿಮಗೆ ಕಷ್ಟದಲ್ಲಿ ನೆರವಿಗೆ ಬಂದವರನ್ನು ಮರೆಯಬೇಡಿ. ಅವರ ಬೇಡಿಕೆಗೂ ಸ್ಪಂದಿಸಿ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಮಿಥುನ
ನಿಮ್ಮನ್ನು ಆದರಿಸುವವರನ್ನು ಕಡೆಗಣಿಸಬೇಡಿ. ಹಣದ ಮುಗ್ಗಟ್ಟಿಗೆ ಇಂದು ಪರಿಹಾರ ದೊರಕಲಿದೆ. ಮಿತ್ರರ ಜತೆ ವಾಗ್ವಾದ.
ಕಟಕ
ಉದ್ಯೋಗ ಬದಲಿಸಲು ಯೋಜಿಸಿದ್ದರೆ ಮುಂದುವರಿಯಿರಿ. ಕಾಲ ನಿಮಗೆ ಪೂರಕವಾಗಿದೆ. ಕುಟುಂಬಸ್ಥರ ವಿರೋಧ ಶಮನ. ಧನಪ್ರಾಪ್ತಿ.
ಸಿಂಹ
ಇಂದು ಅಶಾಂತ ಮನಸ್ಥಿತಿ. ಪ್ರತಿಕೂಲ ಪರಿಸ್ಥಿತಿ ಬಂದರೆ ಹದ ತಪ್ಪಿ ವರ್ತಿಸಬೇಡಿ. ಎಲ್ಲರನ್ನೂ ನಿಮ್ಮ ವಿರೋಧಿಗಳಂತೆ ಕಾಣಬೇಡಿ.
ಕನ್ಯಾ
ಹಳೆಯ ನೋವು ಮತ್ತೆ ಕಾಡಬಹುದು. ಅದಕ್ಕೆ ಶಾಶ್ವತ ಪರಿಹಾರ ಹುಡುಕಿ. ಚಿಂತೆ ಬೇಡ, ನಿಮ್ಮೆಣಿಕೆಯಂತೆ ಎಲ್ಲವೂ ಸಾಗುವುದು.
ತುಲಾ
ನಿಮ್ಮ ಕುರಿತಂತೆ ಕೆಲವರದು ತೋರಿಕೆಯ ಮೆಚ್ಚುಗೆ. ಅವರಿಗೆ ಮರುಳಾಗಬೇಡಿ. ಸಂಕೀರ್ಣ ವಿಚಾರದಲ್ಲಿ ವಿವೇಕದಿಂದ ವ್ಯವಹರಿಸಿ.
ವೃಶ್ಚಿಕ
ಬದುಕಿನಲ್ಲಿ ಶಿಸ್ತು ಅಳವಡಿಸಿ. ಬೇಕಾಬಿಟ್ಟಿ ಧೋರಣೆ ಸರಿಯಲ್ಲ. ನಿಮ್ಮ ದೌರ್ಬಲ್ಯ ಸರಿಪಡಿಸಿ. ಮನೆಯಲ್ಲಿ ಮೃದುವಾಗಿ ವರ್ತಿಸಿ.
ಧನು
ಬಾಕಿ ಉಳಿದ ಕಾರ್ಯ ಪೂರೈಸಲು ಆದ್ಯತೆ ಕೊಡಿ. ವಿಶ್ವಾಸದ ಕೊರತೆ ಕಾಡಲಿದೆ. ಎಲ್ಲವೂ ನಿಮಗೆ ವಿರುದ್ಧವಾಗಿದೆ ಎಂಬ ಭಾವ ಕಾಡಲಿದೆ.
ಮಕರ
ವೇಳಾಪಟ್ಟಿ ಹಾಕಿಕೊಂಡು ವ್ಯವಹರಿಸಿ. ವಿಳಂಬ ತಪ್ಪಿಸಿರಿ. ಯಾರದೋ ಮರ್ಜಿಗೆ ತಕ್ಕಂತೆ ಬಾಗಬೇಡಿ, ಸ್ವಂತಿಕೆಯಿರಲಿ.
ಕುಂಭ
ಹೊಸತನಕ್ಕೆ ತೆರೆದುಕೊಳ್ಳಿ. ಕೆಲವು ವಿಷಯಗಳಲ್ಲಿ ತೊಡಗಿಕೊಳ್ಳಿ. ನನಗಿದು ಬೇಡ ಎಂಬ ನಿರಾಸಕ್ತಿ ತ್ಯಜಿಸಿ. ಆರ್ಥಿಕ ಕೊರತೆ ನೀಗಲಿದೆ.
ಮೀನ
ನೆಮ್ಮದಿ ಕೆಡಿಸುವ ಪ್ರಸಂಗ ಉಂಟಾದೀತು. ಅಸಹನೆ ಉಂಟಾದೀತು. ದೃಢ ಮನಸ್ಸಿನಿಂದ ಅದನ್ನು ನಿಭಾಯಿಸಿಕೊಳ್ಳಿ. ಕುಟುಂಬಸ್ಥರ ಸಹಕಾರ.

Must Read