ದಿನಭವಿಷ್ಯ| ಈ ರಾಶಿಯವರಿಗೆ ಇಂದು ಅದೃಷ್ಟ ಜೊತೆಗಿರಲಿದೆ. ಎಲ್ಲಾ ಕಾರ್ಯಗಳಲ್ಲಿ ಸಫಲತೆ

ಮೇಷ
ಕೆರಿಯರ್ ಮತ್ತು ಹಣದ ಕುರಿತಂತೆ ಹೆಚ್ಚು ಚಿಂತಿಸಬೇಕು. ಇಲ್ಲವಾದರೆ ಹಿನ್ನಡೆ ಸಂಭವ. ಸ್ನೇಹಿತರಿಂದ ಸಹಕಾರ ಪಡೆಯುವಿರಿ. ಕೌಟುಂಬಿಕ ನೆಮ್ಮದಿ.

ವೃಷಭ
ಸಮಸ್ಯೆಯ ಪರಿಹಾರ ಕ್ಕಾಗಿ ಅದರ ಮೂಲಕ್ಕೆ ಹೋಗಿ. ಆಗ ಸುಲಭ ಪರಿಹಾರ ಸಾಧ್ಯ. ನಿಮ್ಮ ಸಮಸ್ಯೆಗೆ ಇತರರ ಮೇಲೆ ಗೂಬೆ ಕೂರಿಸಬೇಡಿ.

ಮಿಥುನ
ನಿಮ್ಮ ಖಾಸಗಿ ಬದುಕಿಗೆ ಇಂದು ಹೆಚ್ಚು ಗಮನ ಕೊಡಬೇಕು. ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಯಬೇಕಿಲ್ಲ.

ಕಟಕ
ಇತರರ ಸ್ವಭಾವವನ್ನು ಅಂದಾಜಿಸುವಲ್ಲಿ ನೀವು ಪರಿಣತರು. ಅದು ನಿಮಗೆ ವ್ಯವಹಾರ ನಡೆಸಲು ಸುಲಭ ಅವಕಾಶ ಕಲ್ಪಿಸುವುದು. ಕೌಟುಂಬಿಕ ಸಹಕಾರ.

ಸಿಂಹ
ಬಾಕಿ ಉಳಿಸಿರುವ ಕೆಲಸವನ್ನು ಪೂರ್ಣ ಗೊಳಿಸಿ. ಕೌಟುಂಬಿಕ ಉದ್ವಿಗ್ನತೆಯು ಮನಸ್ಸಿನ ಶಾಂತಿ ಕದಡಬಹುದು. ಆರ್ಥಿಕ ಒತ್ತಡ.

ಕನ್ಯಾ
ಹಳೆಯ ಅನುಭವಗಳು ಇಂದಿನ ವ್ಯವಹಾರಕ್ಕೆ ನೆರವು ನೀಡಲಿವೆ. ವ್ಯಕ್ತಿಗಳ ಜತೆ ವ್ಯವಹರಿಸುವಾಗ ಎಚ್ಚರ ವಹಿಸಿ. ನಯವಾದ ಮಾತಿಗೆ ಮರುಳಾಗದಿರಿ.

ತುಲಾ
ಉದ್ಯೋಗದಲ್ಲಿ ಒತ್ತಡ ಹೆಚ್ಚು. ಗುರಿ ಸಾಸಲಾಗದೆ ತಲ್ಲಣ.ಧಾರ್ಮಿಕ ವಿಚಾರಗಳು ಹೆಚ್ಚು ಮನಸ್ಸನ್ನು ಆವರಿಸಬಹುದು.

ವೃಶ್ಚಿಕ
ಖಾಸಗಿ ಬದುಕಿನಲ್ಲಿ ಕೆಲವು ಅಹಿತ ಬೆಳವಣಿಗೆ ಉಂಟಾದೀತು. ಅದನ್ನು ವಿವೇಕದಿಂದ ನಿಭಾಯಿಸಿ. ಯಾರದೋ ಚಿತಾವಣೆಗೆ ಒಳಗಾಗಿ ದುಡುಕಿನ ನಿರ್ಧಾರ ತಾಳದಿರಿ.

ಧನು
ವ್ಯಕ್ತಿಗತ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ಕೊಡಿ. ಆಪ್ತ ಬಂಧುಗಳ ಮನಸ್ಸು ನೋಯಿಸಬೇಡಿ. ಆರೋಗ್ಯ ಸಮಸ್ಯೆ ಕಾಡಬಹುದು.

ಮಕರ
ಯಾರೊಂದಿಗೆ ಸ್ನೇಹ ಮಾಡಿಕೊಳ್ಳುವಿರಿ ಎಂಬ ಬಗ್ಗೆ ಎಚ್ಚರವಿರಲಿ. ಎಲ್ಲಾ ಸ್ನೇಹಿತರು ನಿಮ್ಮ ಹಿತೈಷಿಗಳಲ್ಲ. ಕೌಟುಂಬಿಕ ಹೊಣೆ ಹೆಚ್ಚುವುದು.

ಕುಂಭ
ಅದೃಷ್ಟ ನಿಮ್ಮೊಂದಿಗಿದೆ. ಕೆಲಸಗಳಲ್ಲಿ ಸಫಲತೆ. ಕೌಟುಂಬಿಕ ವ್ಯಾಜ್ಯ ಪರಿಹಾರ ಕಾಣುವುದು. ಮುನಿಸಿಕೊಂಡವರು ಹತ್ತಿರವಾಗುವರು. ಧನಲಾಭ ಸಂಭವ.

ಮೀನ
ವ್ಯಕ್ತಿಗತ ಸಮಸ್ಯೆ ಪರಿಹಾರಕ್ಕೆ ಇತರರ ನೆರವು ಕೋರಬೇಡಿ. ಅದನ್ನು ನೀವೇ ನಿಭಾಯಿಸಬೇಕು. ಅದೃಷ್ಟ ನಿಮ್ಮ ಜತೆಗಿದೆ ಚಿಂತಿಸದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!