ಅಸಾಧ್ಯ ಎಂದುಕೊಂಡಿದ್ದನ್ನು ಸಾಧಿಸುವ ದಿನ ಈ ರಾಶಿಯವರಿಗೆ…

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮೇಷ
ಸಮ್ಮಿಶ್ರ ಭಾವನೆ ಇಂದು ಕಾಡುವುದು. ಹಳೆಯ ಕಿರಿಕಿರಿಗಳು ನಿಮ್ಮ ಈಗಿನ ಸಂತೋಷ ಹಾಳು ಮಾಡಬಹುದು. ನೆಗೆಟಿವ್ ಚಿಂತನೆ ಬದಿಗಿರಿಸಿರಿ.

ವೃಷಭ
ನಿಮ್ಮಿಂದ ಅಸಾಧ್ಯ ಎಂದು ಇತರರು ಭಾವಿಸಿದ ಕಾರ್ಯವನ್ನು ನೀವು ಸಾಧಿಸುವಿರಿ. ಅದಕ್ಕೆ ನಿಮ್ಮಲ್ಲಿ ಹೆಚ್ಚಿದ ಆತ್ಮವಿಶ್ವಾಸವೇ ಕಾರಣ. ಆರ್ಥಿಕ ಪ್ರಗತಿ.

ಮಿಥುನ
ಇಂದು ನಿಮ್ಮನ್ನು ಯಾವುದೇ ಹಿನ್ನಡೆ ಬಾಧಿಸದು. ಹಾಗಾಗಿ ಪ್ರಮುಖ ಕಾರ್ಯ ಸುಸೂತ್ರ. ಆಪ್ತರಿಂದ ನಿಮ್ಮ ಹರ್ಷ ಹೆಚ್ಚಿಸುವ ಕೊಡುಗೆ ಸಿಕ್ಕೀತು.

ಕಟಕ
ಮನಸು ಅಸ್ತವ್ಯಸ್ತ. ಕೆಲಸದಲ್ಲಿ ಏಕಾಗ್ರತೆ ಮೂಡದು. ಅದಕ್ಕೆ ಕಾರಣ  ಇರುವ ಸಮಸ್ಯೆಯ ಜತೆಗೇ ಹೊಸದಾಗಿ ಹುಟ್ಟಿಕೊಳ್ಳುವ ಸಮಸ್ಯೆ.

ಸಿಂಹ
ಖಾಸಗಿ ಬದುಕಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟರೂ ಬಳಿಕ  ಶಮನವಾಗುವುದು. ಆತ್ಮೀಯ ವ್ಯಕ್ತಿಗಳ ಸಂಗದಲ್ಲಿ ಹಿತಾನುಭವ ಪಡೆಯುವಿರಿ.

ಕನ್ಯಾ
ಆರಂಭದಲ್ಲಿ ಆತಂಕ, ಅನಿಶ್ಚಿತತೆ , ಅಭದ್ರತೆ ಕಾಡಬಹುದು. ಆದರೆ ದಿನ ಕಳೆದಂತೆ ನಿಮ್ಮ ಆತಂಕ ನಿವಾರಣೆ. ಆತ್ಮವಿಶ್ವಾಸ ಹೆಚ್ಚಿಸುವ ಬೆಳವಣಿಗೆ.

ತುಲಾ
ಉತ್ಸಾಹದ ದಿನ. ನಿಮಗೆ ಇಷ್ಟವಾಗುವ ಕಾರ್ಯದಲ್ಲಿ ತೊಡಗಿ. ಅದರಲ್ಲಿ ಯಶ ಕಾಣುವಿರಿ. ಖಾಸಗಿ ಆತಂಕವೊಂದು  ನಿವಾರಣೆ.

ವೃಶ್ಚಿಕ
ಯಾವುದೇ ಕೆಲಸದಲ್ಲಿ ಮನಸ್ಸು ನಿಲ್ಲದು. ನಿಮ್ಮ ಮನಸ್ಸು ಇಂದು ಬೇಗನೆ ಚಂಚಲವಾಗುವುದು. ಹಲವಾರು ವಿಷಯಗಳು ಕಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಧನು
ಮಾನಸಿಕವಾಗಿ ಇಂದು ಬಸವಳಿಯುವ  ಬೆಳವಣಿಗೆ. ಆದರೆ ಅದು ಅಲ್ಪಕಾಲೀನ. ಮತ್ತೆ ಉತ್ಸಾಹ ತುಂಬುವ ಸನ್ನಿವೇಶ ನಿರ್ಮಾಣ. ಪೂರಕ ಅಭಿವೃದ್ಧಿ.

ಮಕರ
ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಸಫಲ. ಇದರಿಂದಾಗಿ ಪ್ರತಿಕೂಲ ಸನ್ನಿವೇಶದಲ್ಲೂ ಸಹನೆ ಕಾಯ್ದುಕೊಳ್ಳುವಿರಿ. ಎಲ್ಲರ ಮೆಚ್ಚುಗೆ.

ಕುಂಭ
ಎಲ್ಲರ ಜತೆ ಉತ್ತಮ ಹೊಂದಾಣಿಕೆ ಸ್ಥಾಪಿಸಿ. ಅದರಿಂದ ನಿಮ್ಮ ಗುರಿ ಈಡೇರುವುದು. ನಿಷ್ಟುರ ನಡೆ ಇತರರ ಅಸಮಾಧಾನಕ್ಕೆ ಕಾರಣವಾದೀತು.

ಮೀನ
ನೆಗೆಟಿವ್ ಚಿಂತನೆಗಳು ಮನಸ್ಸನ್ನು ವ್ಯಾಪಿಸಬಹುದು. ಅದಕ್ಕೆ ನೀವು ಎದುರಿಸುತ್ತಿರುವ ಸಮಸ್ಯೆ ಕಾರಣ. ಧೈರ್ಯಗೆಡದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!