ಮೇಷ
ಖರ್ಚು ವೆಚ್ಚಳ. ಖರೀದಿಯ ಹುಮ್ಮಸ್ಸಿಗೆ ನಿಯಂತ್ರಣ ಹಾಕಬೇಕು. ಆರೋಗ್ಯದ ಕುರಿತು ನಿರ್ಲಕ್ಷ್ಯ ಬೇಡ. ವೈದ್ಯರನ್ನು ಕಾಣುವುದು ಒಳಿತು.
ವೃಷಭ
ಮನೆಯಲ್ಲಿ ಶಾಂತಿ ನೆಲೆಸಲು ವಾಗ್ವಾದಕ್ಕೆ ಹೋಗದಿರಿ. ಕೆಲವು ವಿಷಯಗಳಿಗೆ ಅಸಮ್ಮತಿ ಇದ್ದರೂ ಅದನ್ನು ವ್ಯಕ್ತಪಡಿಸದಿರಿ. ವಿದ್ಯಾರ್ಥಿಗಳಿಗೆ ಯಶ.
ಮಿಥುನ
ನಿಮ್ಮ ಕೆಲಸದ ಗತಿ ಕುಂಠಿತವಾದೀತು. ಅದಕ್ಕೆ ಕೆಲವರ ಅಸಮಾಧಾನ, ಅಸಹಕಾರ ಕಾರಣ. ಸಮಾಧಾನದಿಂದ ನಿಭಾಯಿಸಿ. ಎಲ್ಲ ಸರಿಯಾಗುವುದು.
ಕಟಕ
ಹೊಸ ಸಂಬಂಧ ಬೆಳೆಸಲು ಹೋಗಿ ಇರುವ ಬಾಂಧವ್ಯ ಕಳಕೊಳ್ಳದಿರಿ. ವಿವೇಚನೆ ಇರಲಿ. ವೃತ್ತಿ ಸಮಸ್ಯೆಗೆ ಹಿರಿಯರ ಸಲಹೆ ಪಡೆಯುವುದೊಳಿತು.
ಸಿಂಹ
ಮಾನಸಿಕ ಒತ್ತಡ. ಕೆಲಸ ನಿಧಾನ. ಇದರಿಂದಾಗಿ ದೈಹಿಕ ಆಯಾಸವೂ ಕಾಡಬಹುದು. ನಯವಾಗಿ ಮಾತಾಡಿ ವಂಚಿಸುವವರ ಕುರಿತು ಎಚ್ಚರದಿಂದಿರಿ.
ಕನ್ಯಾ
ಅತಿ ಭಾವುಕತೆಯಿಂದ ವರ್ತಿಸುವ ಸಾಧ್ಯತೆ ಇದೆ. ಭಾವನೆ ನಿಯಂತ್ರಿಸಿ. ಸಂಬಂಧದಲ್ಲಿ ನಿಮ್ಮಿಂದಲೂ ಕೆಲವು ಸಮಸ್ಯೆ ಸೃಷ್ಟಿಯಾದೀತು. ಎಚ್ಚರ ವಹಿಸಿರಿ.
ತುಲಾ
ನಿಮಗೆ ಉತ್ಸಾಹರಹಿತ ದಿನ. ಕಾರ್ಯದಲ್ಲಿ ನಿರಾಸಕ್ತಿ. ನಿಮ್ಮಿಂದ ತಪ್ಪು ಉಂಟಾದೀತು. ನಿಮ್ಮ ಸುತ್ತಲಿನ ನಯವಂಚಕರ ಕುರಿತು ಎಚ್ಚರಿಕೆಯಿಂದಿರಿ.
ವೃಶ್ಚಿಕ
ಆರ್ಥಿಕವಾಗಿ ಸಂಕಷ್ಟ ಒದಗೀತು. ಖರ್ಚು ನಿಯಂತ್ರಿಸಿ. ಕೆಲವರ ಟೀಕೆಗೆ ಅಂಜಬೇಕಿಲ್ಲ. ವೃತ್ತಿಯಲ್ಲಿ ಹೆಚ್ಚು ಸಹನೆ ಪ್ರದರ್ಶಿಸಿ. ಹೊಂದಾಣಿಕೆ ಮುಖ್ಯವಾದೀತು.
ಧನು
ಯಾವುದೋ ಮುಖ್ಯ ವಿಷಯ ಇತ್ಯರ್ಥ ಮಾಡಲು ಇನ್ನಷ್ಟು ವಿಳಂಬ ಮಾಡದಿರಿ. ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಿರಿ. ನೆರವು ಪಡೆಯಿರಿ.
ಮಕರ
ವೃತ್ತಿ ಕ್ಷೇತ್ರ ಅಥವಾ ಮನೆಯಲ್ಲಿ ಅಹಿತ ಬೆಳವಣಿಗೆ. ಆದರೆ ಅದನ್ನು ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಅಗತ್ಯಬಿದ್ದಲ್ಲಿ ಕಠಿಣ ನಿಲುವು ಅವಶ್ಯ.
ಕುಂಭ
ಗೊಂದಲ, ದ್ವಂದ್ವದ ಮನಸ್ಥಿತಿ. ಯಾವುದೋ ವಿಷಯದಲ್ಲಿ ಸರಿಯಾದ ನಿರ್ಧಾರ ತಾಳಲಾಗದೆ ತೊಳಲಾಡುವಿರಿ. ಪ್ರಾಜ್ಞರ ಸಲಹೆ ಪಡೆಯುವುದೊಳಿತು.
ಮೀನ
ಆರೋಗ್ಯ ಸಮಸ್ಯೆ ಕಾಡಬಹುದು. ಅದನ್ನು ನಿರ್ಲಕ್ಷ್ಯ ಮಾಡಬೇಡಿ. ವೃತ್ತಿಯಲ್ಲಿ ನಿಮಗೆ ಅಸಮಾಧಾನ ತರುವ ಬೆಳವಣಿಗೆ ಉಂಟಾದೀತು.