ಮಂದಿರಕ್ಕಾಗಿ ರಾಮನೇ ಆಯ್ಕೆ ಮಾಡಿದ ಭಕ್ತ ಮೋದಿ: ಎಲ್ ಕೆ ಆಡ್ವಾಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಯೋಧ್ಯೆಯಲ್ಲಿ ಭಗವಾನ್ ರಾಮನ ಭವ್ಯ ಮಂದಿರದ (Ayodhya Ram Mandir) ನಿರ್ಮಾಣವನ್ನು ವಿಧಿಯೇ(Fate) ನಿರ್ಧರಿಸಿತ್ತು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಆಯ್ಕೆ ಮಾಡಿದೆ ಎಂದು ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಆಡ್ವಾಣಿ (LK Advani) ಅವರು ಹೇಳಿದ್ದಾರೆ.

ರಾಷ್ಟ್ರಧರ್ಮ ಪತ್ರಿಕೆಯೊಂದಿಗೆ ಮಾತನಾಡಿ, ಅವರು ತಮ್ಮ ರಥಯಾತ್ರೆ (Rath Yatra) ಹಾಗೂ ರಾಮ ಮಂದಿರ ನಿರ್ಮಾಣ ಕುರಿತು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

‘ರಾಮ ಮಂದಿರ ನಿರ್ಮಾಣ್, ಏಕ ದಿವ್ಯ ಸ್ವಪ್ನ ಕಿ ಪೂರ್ತಿ’ ಶಿರೋನಾಮೆಯ ಲೇಖನದಲ್ಲಿ ಆಡ್ವಾಣಿ ಅವರು ರಾಮಮಂದಿರ ನಿರ್ಮಾಣಕ್ಕಾಗಿ 33 ವರ್ಷಗಳ ಹಿಂದೆ ನಡೆಸಿದ ‘ರಥಯಾತ್ರೆ’ಯನ್ನು ಸ್ಮರಿಸಿಕೊಂಡಿದ್ದಾರೆ. ಅಯೋಧ್ಯೆ ಚಳವಳಿಯು “ಅತ್ಯಂತ ನಿರ್ಣಾಯಕ ಮತ್ತು ಪರಿವರ್ತನೆಯ ಘಟನೆ” ಎಂದು ಅವರು ನಂಬುತ್ತಾರೆ. ಅವರ ರಾಜಕೀಯ ಪ್ರಯಾಣವು ಭಾರತವನ್ನು ಮರು ಶೋಧಿಸಲು ಮತ್ತು ಈ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ಪುನಃ ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗ ರಥಯಾತ್ರೆ 33 ವರ್ಷಗಳನ್ನು ಪೂರೈಸಿದೆ. 1990 ಸೆಪ್ಟೆಂಬರ್ 25ರಂದು ರಂದು ಬೆಳಗ್ಗೆ ರಥಯಾತ್ರೆಯನ್ನು ಪ್ರಾರಂಭಿಸಿದಾಗ, ಈ ಯಾತ್ರೆಯು ಭಗವಾನ್ ರಾಮನ ಮೇಲಿನ ನಂಬಿಕೆಯು ದೇಶದಲ್ಲಿ ಒಂದು ಚಳುವಳಿಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿರಲಿಲ್ಲ.ಆಗ ಮೋದಿ ಅವರು ಹೆಚ್ಚು ಪ್ರಸಿದ್ಧರಾಗಿರಲಿಲ್ಲ. ಆದರೆ ಅದೇ ಸಮಯದಲ್ಲಿ ಭಗವಾನ್ ರಾಮನು ತನ್ನ ದೇವಾಲಯವನ್ನು ಪುನರ್ನಿರ್ಮಿಸಲು ತನ್ನ ಭಕ್ತನನ್ನು (ಮೋದಿ) ಆಯ್ಕೆ ಮಾಡಿದ್ದನು ಎಂದು ಆಡ್ವಾಣಿ ಅವರು ಹೇಳಿದ್ದಾರೆ. ಅಯೋಧ್ಯೆಯಲ್ಲಿ ಒಂದು ದಿನ ಖಂಡಿತವಾಗಿ ಶ್ರೀರಾಮನ ಭವ್ಯವಾದ ಮಂದಿರವನ್ನು ನಿರ್ಮಿಸಲಾಗುವುದು ಎಂದು ವಿಧಿ ನಿರ್ಧರಿಸಿದೆ ಎಂದು ಆ ಸಮಯದಲ್ಲಿ ನಾನು ಭಾವಿಸಿದ್ದೆ ಎಂದು ಆಡ್ವಾಣಿ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!