HEALTH | ಪ್ರತೀದಿನ ಬಳಸಿ ಜೇನುತುಪ್ಪ? ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ ಇದೆ ನೋಡಿ..

ಚಳಿಗಾಲ ಅನೇಕ ಮಂದಿಗೆ ದೇಹಾರೋಗ್ಯದಲ್ಲಿ ಸಮಸ್ಯೆ ತಂದೊಡ್ಡುವ ಸಮಯ. ವಾತಾವರಣದಲ್ಲಿ ಶೀತ ಹವೆ ಜಾಸ್ತಿಯಾಗಿರುವ ಈ ಕಾಲದಲ್ಲಿ ದೇಹಾರೋಗ್ಯವನ್ನು ಕಾಪಾಡಲು ಆಹಾರ ಚರ್ಯೆಯಲ್ಲಿ ಕೊಂಚ ಬದಲಾವಣೆ ಮಾಡುವುದು ಸೂಕ್ತ. ಸಂಶೋದನೆಗಳ ಪ್ರಕಾರ ಆಹಾರ ಕ್ರಮದಲ್ಲಿ ಜೇನು ತುಪ್ಪವನ್ನು ಬಳಸುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದೆಂದು ಹೇಳಲಾಗಿದೆ.

ಚಳಿಗಾಲದಲಿ ನೆಗಡಿ, ಕಫ, ಗಂಟಲು ಉರಿ, ಕೆಮ್ಮಿನಂತಹ ಅನೇಕ ಕಾಯಿಲೆಗಳು ಮನುಷ್ಯನಲ್ಲಿ ಕಂಡು ಬರುತ್ತವೆ. ಕೈ ಕಾಲುಗಳಲ್ಲಿ ತೊಂದರೆ, ತುಟಿ ಒಡೆಯುವ ಸಮಸ್ಯೆ, ಪಾದದ ಹಿಮ್ಮಡಿ ಒಡೆಯುವುದು ಹೀಗೆ ಅನೇಕ ಸಮಸ್ಯೆಗಳು ಬಾಧಿಸುತ್ತವೆ. ಉಷ್ಣಾಂಶ ಕಡಿಮೆಯಾಗುವುದರಿಂದ ಈ ರೀತಿಯ ತೊಂದರೆಗಳು ಉಂಟಾಗುತ್ತವೆ. ದೇಹದಲ್ಲಿ ಉಷ್ಣಾಂಶವನ್ನು ಸರಿಪಡಿಸಲು ಜೇನು ತುಪ್ಪ ಸಹಕಾರಿಯಾಗುತ್ತದೆ.

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಚಳಿಗಾಲದಲ್ಲಿ ಸೇವಿಸುವುದು ಉತ್ತಮ.
ನೈಸರ್ಗಿಕ ಸಿಹಿ ಪದಾರ್ಥವಾದ ಜೇನುತುಪ್ಪ ಕಿಣ್ವಗಳು, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿರುತ್ತವೆ. ದೇಹಾರೋಗ್ಯವನ್ನು ಉತ್ತಮ ಪಡಿಸುವುದಲ್ಲದೆ, ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

ಜೇನುತುಪ್ಪದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಸಮೃದ್ಧವಾಗಿರುವುದರಿಂದ, ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯಕವಾಗುತ್ತದೆ.

ಕೆಮ್ಮು ಕಫದ ಸಮಸ್ಯೆಯನ್ನು ದೂರ ಮಾಡಲು ಜೇನುತುಪ್ಪ ಸಹಕಾರಿಯಾಗುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹಾರೋಗ್ಯ ವೃದ್ಧಿ ಮಾಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ರಕ್ತದೊತ್ತಡವನ್ನು ಕಡಿಮೆ ಮಾಡಲು, ಹೃದಯ ಬಡಿತವನ್ನು ನಿಯಂತ್ರಿಸಲು, ರಕ್ತದ ಕೊಬ್ಬಿನ ಮಟ್ಟವನ್ನು ಸುಧಾರಿಸಲು ಮತ್ತು ಆರೋಗ್ಯಕರ ಜೀವಕೋಶಗಳ ಸಾವನ್ನು ತಡೆಯಲು ಸಹಕಾರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!