ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ತಡರಾತ್ರಿ ಬಳಿಕ ತೀವ್ರಗೊಂಡಿರುವ ಮಳೆ ಹಲವು ಅಧ್ವಾನ ಸೃಷ್ಟಿಸುತ್ತಿದೆ.
ಸೋಮವಾರ ಸಂಜೆಯಿಂದ ಬಂಟ್ವಾಳ ತಾಲೂಕಿನಾದ್ಯಂತ ಎಡೆಬಿಡದೆ ಮಳೆಯಾಗುತ್ತಿದ್ದು, ಜೀವನದಿ ನೇತ್ರಾವತಿ ಅಪಾಯದ ಕರೆಗಂಟೆ ಬಾರಿಸುತ್ತಿದೆ.
ನೀರಿನಮಟ್ಟ ಏಕಾಏಕಿ ಏರಿಕೆಯಾಗುತ್ತಿದ್ದು ನದಿಪಾತ್ರದ ಜನತೆ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಬೆಳಿಗ್ಗೆ ಸುಮಾರು 10.30 ರ ಹೊತ್ತಿಗೆ ನೇತ್ರಾವತಿ ನದಿ 8.3 ಮೀ.ನಲ್ಲಿ ಹರಿಯುತ್ತಿದ್ದು, ನದಿ ತೀರ ಪ್ರದೇಶದ ಶಾಲೆಗಳಿಗೆ ರಜೆ ಸಾರಲಾಗಿದೆ.
ಎರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಸೋಮವಾರ ಸಂಜೆಯಿಂದ ವಿಪರೀತ ಗಾಳಿ, ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.