ರೆಸಿಪಿ: ಕಿಚಡಿ
ಸಮಯ: 20 ನಿಮಿಷ
ಸಾಮಾಗ್ರಿಗಳು
ಹೆಸರುಬೇಳೆ
ತೊಗರಿಬೇಳೆ
ಪಾಲಕ್ ಸೊಪ್ಪು
ಈರುಳ್ಳಿ
ಟೊಮ್ಯಾಟೊ
ಜೀರಿಗೆ
ಸಾಸಿವೆ
ಎಣ್ಣೆ
ಕರಿಬೇವು
ಕೊತ್ತಂಬರಿ
ಸಾಂಬಾರ್ ಪುಡಿ
ಖಾರದ ಪುಡಿ
ಅರಿಶಿಣ
ಮಾಡುವ ವಿಧಾನ
ಮೊದಲು ಸೊಪ್ಪು,ಹೆಸರುಬೇಳೆ,ತೊಗರಿಬೇಳೆ,ಅಕ್ಕಿ ಉಪ್ಪು ಹಾಗೂ ಅರಿಶಿಣ ಹಾಕಿ ಕುಕ್ಕರ್‌ನಲ್ಲಿ ಕೂಗಿಸಿ.
ನಂತರ ಬಾಣಲೆಗೆ ಉಳಿದ ಎಲ್ಲ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ.
ವಿಶಲ್ ಆರಿದ ನಂತರ ಸೊಪ್ಪು ಬೇಳೆ ಅಕ್ಕಿಯನ್ನು ಇದಕ್ಕೆ ಮಿಕ್ಸ್ ಮಾಡಿ.
ನಂತರ ಖಾರದ ಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ.
ನಂತರ ತುಪ್ಪ ಹಾಕಿ ಸ್ಟೊವ್ ಆಫ್ ಮಾಡಿದರೆ ಕಿಚಡಿ ರೆಡಿ