July 29, 2026
Wednesday, July 29, 2026
spot_img

ಚುನಾವಣಾ ಕಣದಲ್ಲಿ ‘ದಳಪತಿ’ ಮ್ಯಾಜಿಕ್: ಪೆರಂಬೂರು ಕ್ಷೇತ್ರದಲ್ಲಿ ನಟ ವಿಜಯ್ ಅಬ್ಬರ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ವಿಧಾನಸಭಾ ಚುನಾವಣಾ ಫಲಿತಾಂಶದ ಕಾವು ಏರುತ್ತಿದ್ದು, ಇಡೀ ದೇಶದ ಗಮನ ಈಗ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದತ್ತ ನೆಟ್ಟಿದೆ. ತಮಿಳುನಾಡಿನಲ್ಲಿ ಈ ಬಾರಿ ಸ್ಟಾರ್ ನಟ ವಿಜಯ್ ಅವರ ರಾಜಕೀಯ ಪ್ರವೇಶ ಭಾರಿ ಸಂಚಲನ ಮೂಡಿಸಿತ್ತು. ಅವರನ್ನು ಪ್ರಬಲ ಸ್ಪರ್ಧಿ ಎಂದೇ ವಿಶ್ಲೇಷಿಸಲಾಗಿದ್ದರೂ, ಸದ್ಯದ ಟ್ರೆಂಡ್ ಪ್ರಕಾರ ಅವರು ಒಂದು ಸ್ಥಾನದಿಂದ ಹಿನ್ನಡೆ ಅನುಭವಿಸಿದ್ದಾರೆ.

ಹಿನ್ನಡೆಯ ನಡುವೆಯೂ ವಿಜಯ್ ಅಭಿಮಾನಿಗಳಿಗೆ ಒಂದು ಆಶಾದಾಯಕ ಸುದ್ದಿ ಇದೆ. ಪೆರಂಬೂರು ಕ್ಷೇತ್ರದಲ್ಲಿ ನಟ ವಿಜಯ್ ಸದ್ಯ ಮುನ್ನಡೆ ಸಾಧಿಸುತ್ತಿದ್ದಾರೆ. ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ರಾಜ್ಯದ ಇತರ ಭಾಗಗಳಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದು ಸದ್ಯದ ಕುತೂಹಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !