ವಿಧಾನಸಭೆಯ ಅಧಿವೇಶನದ ಕಲಾಪ ಹಾಳು ಮಾಡಿದ ಕಾಂಗ್ರೆಸ್ ಪಕ್ಷದ ವರ್ತನೆ ಖಂಡನೀಯ: ಜೋಗಿ ಮಂಜು

ಹೊಸ ದಿಗಂತ ವರದಿ, ಮೈಸೂರು:

ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ’ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿರುವುದನ್ನೇ ದೊಡ್ಡದು ಮಾಡಿ, ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿಧಾನಸಭೆ ಅಧಿವೇಶನದಲ್ಲಿ ಅಹೋರಾತ್ರಿ ಧರಣಿ ನಡೆಸಿ, ಅಮೂಲ್ಯವಾದ ಕಲಾಪವನ್ನು ಹಾಳು ಮಾಡಿದ ಕಾಂಗ್ರೆಸ್ ಪಕ್ಷದವರ ವರ್ತನೆ ತೀವ್ರ ಖಂಡನೀಯ` ಎಂದು ಬಿಜೆಪಿ ಮೈಸೂರು ನಗರ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ಹೇಳಿದರು.
ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿದ ಅವರು `ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಮುಂದಿನ ನೂರಾರು ವರ್ಷಗಳಲ್ಲಿ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸಬಹುದು ಎಂದು ಹೇಳಿರಬಹುದು. ಆದರೆ ಅವರು ರಾಷ್ಟç ಧ್ವಜವನ್ನು ತೆಗೆಯುತ್ತೇವೆಂದು ಹೇಳಿಲ್ಲ. ಈ ಹೇಳಿಕೆಯನ್ನೇ ಪ್ರಮಾದವೆಂಬOತೆ ಕಾಂಗ್ರೆಸ್ ನಾಯಕರು ಬಿಂಬಿಸುವುದು ಸರಿಯಲ್ಲ’ ಎಂದು ಕಿಡಿಕಾರಿದ್ದಾರೆ.
ಸದನದ ಒಳಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೂಂಡಾ ವರ್ತನೆಯನ್ನು ಖಂಡಿಸುತ್ತೇನೆ ಮತ್ತು ಸದನದಲ್ಲಿ ಕಲಾಪ ನಡೆಯಲು ಅಡ್ಡಿಪಡಿಸಿ,ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ನ ಸದಸ್ಯರು ಕರ್ನಾಟಕ ಜನರ ಕ್ಷಮೆ ಯಾಚಿಸಬೇಕು,ಸದನದ ಒಳಗೆ ರಾಷ್ಟçಧ್ವಜ ದುರ್ಬಳಕೆ ಮಾಡಿರುವ ಸದಸ್ಯರ ಮೇಲೆ ಕಾನೂನು ರೀತಿಯ ಕ್ರಮ ತೆಗೆದು ಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!