ಭಾರತದ ಇಸ್ಲಾಮೀಕರಣದ ಯೋಜನೆಯ ಪ್ರಯೋಗಾತ್ಮಕ ಪ್ರಕರಣವೇ ಹಿಜಾಬ್ ವಿವಾದ

ಹೊಸ ದಿಗಂತ ವರದಿ, ಮೈಸೂರು:

ಭಾರತದ ಇಸ್ಲಾಮೀಕರಣದ ಯೋಜನೆಯ ಪ್ರಯೋಗಾತ್ಮಕ ಪ್ರಕರಣವೇ ಹಿಜಾಬ್ ವಿವಾದವಾಗಿದ್ದು, ಇದರ ಹಿಂದಿರುವ ರಾಷ್ಟ್ರ ವಿರೋಧಿ ಪ್ರತೀಕವಾದದ ಸಂಚು ಬಯಲಾಗಲು ಸೂಕ್ತ ತನಿಖೆ ನಡೆಸಬೇಕೆಂದು ರಾಜ್ಯ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮೈಸೂರು ವಿಭಾಗ ಅಧ್ಯಕ್ಷ ಲೋಹಿತ್ ವಿ.ಅರಸ್, ಉಡುಪಿಯಿಂದ ಪ್ರಾರಂಭವಾದ ಶಾಲಾ-ಕಾಲೇಜುಗಳಲ್ಲಿನ ಹಿಜಾಬ್ ಧರಿಸುವ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರುವುದರ ಹಿಂದೆ ಪಿಎಫ್‌ಐ ಮತ್ತು ಇಸ್ಲಾಮಿಕ್ ಸಂಘಟನೆಗಳ ಪ್ರಾಯೋಜಿತ ಸಂಚು ಇರುವುದು ಕಾಣಿಸುತ್ತಿದೆ. ಶೈಕ್ಷಣಿಕ ವರ್ಷದ ಪ್ರಾರಂಭದಿOದ ಡಿಸೆಂಬರ್ ತನಕ ನೆನಪಾಗದ ಧಾರ್ಮಿಕ ಹಕ್ಕು, ಏಕಾ ಏಕಿ ಹೆಚ್ಚಿರುವುದರಲ್ಲಿ ಪಿಎಫ್‌ಐ ಹಾಗೂ ಸಿಎಫ್‌ಐ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಹಿಜಾಬ್ ಗಾಗಿ ಗದ್ದಲ ಎಬ್ಬಿಸಿರುವ ಹೆಣ್ಣು ಮಕ್ಕಳು ಮುಗ್ದರಲ್ಲ. ಅವರು ಪಿಎಫ್‌ಐನ ವಿದ್ಯಾರ್ಥಿ ಸಂಘಟನೆಯಾದ ಸಿಎಫ್‌ಐ ಸಂಪರ್ಕದಲ್ಲಿದ್ದಾರೆ ಎನ್ನುವುದಕ್ಕೆ ಆ ಹೆಣ್ಣು ಮಕ್ಕಳ ಟ್ವಿಟ್ಟರ್ ಅಕೌಂಟ್ ಸಾಕ್ಷಿ ಒದಗಿಸುತ್ತಿದೆ. ಹಿಜಾಬ್ ವಿವಾದ ಎಬ್ಬಿಸುವಲ್ಲಿ ಸಿಎಫ್‌ಐ ಪಾತ್ರ ಎಷ್ಟಿದೆ ಎನ್ನುವುದನ್ನು ವಿಜಯ್ ಪಟೇಲ್ ಎನ್ನುವವರು ತಮ್ಮ ಟ್ವಿಟ್ಟರ್ ಥ್ರೆಡ್‌ನಲ್ಲಿ ಬಯಲುಗೊಳಿಸಿದ್ದಾರೆ. ಈ ಥ್ರೆಡ್ ಇಟ್ಟುಕೊಂಡು, ಹಿಜಾಬ್ ಧರಿಸಲು ಮೊದಲು ಗದ್ದಲ ಎಬ್ಬಿಸಿದ ವಿದ್ಯಾರ್ಥಿನಿಯರನ್ನು ತನಿಖೆಗೆ ಒಳಪಡಿಸಿದರೆ, ಹಿಜಾಬ್ ಕುತಂತ್ರದ ಹಿಂದಿರುವ ಎಲ್ಲಾ ಸಂಚುಗಳು ಬಯಲಾಗುತ್ತದೆ ಎಂದು ಹೇಳಿದರು.
ಕುಂದಾಪುರದಲ್ಲಿ ಹಿಜಾಬ್ ಗದ್ದಲ ನಡೆಯುವಾಗ ರೌಡಿಶೀಟರ್ ಪಿಎಫ್‌ಐ ಕಾರ್ಯಕರ್ತರು ಡ್ರಾö್ಯಗರ್ ಸಮೇತ ಸಿಕ್ಕಿ ಬಿದ್ದಿರುವುದು, ಕೋಮು ಗಲಭೆ ಎಬ್ಬಿಸುವ ಸಂಚಿರುವುದು ಎದ್ದು ಕಾಣಿಸುತ್ತಿದೆ. ಅದೇ ರೀತಿ ಪಿಎಫ್‌ಐ ತೆಲಂಗಾಣದ ಭಾಗವಾದ ಹೆಚ್‌ವೈಸಿ ಸಂಘಟನೆಯ ಪ್ರಮುಖನೊಬ್ಬ ಕುಂದಾಪುರಕ್ಕೆ ಬಂದು, ಅಲ್ಲಿನ ಹಿಜಾಬ್ ಹೆಣ್ಣು ಮಕ್ಕಳಿಗೆ ಬೆಂಬಲಿಸುವುದು, ಕೊಲ್ಲಿ ರಾಷ್ಟ್ರಗಳಲ್ಲಿ ಈ ವಿಷಯವಾಗಿ ಚರ್ಚೆಗಳು ನಡೆಯುತ್ತಿರುವುದು, ಎಲ್ಲವೂ ಪಿಎಫ್‌ಐ ನಡೆಸುತ್ತಿರುವ ಷಡ್ಯಂತ್ರ ಎನ್ನುವುದು ಮೇಲುನೋಟಕ್ಕೆ ಸಾಬೀತಾಗುತ್ತದೆ. ಹಾಗಾಗಿ ಗೃಹ ಇಲಾಖೆ ತಕ್ಷಣವೇ ವಿಸ್ತೃತ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭಾರತದ ಇಸ್ಲಾಮೀಕರಣದ ಯೋಜನೆಯ ಪ್ರಯೋಗಾತ್ಮಕ ಪ್ರಕರಣವೇ ಹಿಜಾಬ್ ವಿವಾದ. ಇದು ರಾಷ್ಟçದ ಏಕತೆ, ಅಖಂಡತೆ, ಸಮಗ್ರತೆಗೆ ಸವಾಲು ಹಾಗೂ ಗಂಡಾಂತರವಾಗಿದೆ. ಹಾಗಾಗಿಯೇ ಆರಂಭದಲ್ಲಿಯೇ ಇದನ್ನು ಹುಟ್ಟಡಗಿಸಬೇಕು. ಇದನ್ನು ಬೆಳೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಡಬಾರದು ಎಂದು ಒತ್ತಾಯಿಸಿದರು. ಹಿಜಾಬ್ ವಿವಾದ ಭಾರತದ ಇಸ್ಲಾಮೀಕರಣದ ಕನಸನ್ನು ಹೊತ್ತ ಮೂಲಭೂತವಾದಿ ಶಕ್ತಿಗಳ ಹುಚ್ಚಾಟವಾಗಿದೆ. ಸಿಎಎ ಜಾರಿ ಸಂದರ್ಭದಲ್ಲೂ ಇಂತಹ ವಾತಾವರಣವನ್ನು ಹುಟ್ಟು ಹಾಕಲಾಗಿತ್ತು. ಶರಿಯತ್, ಕುರಾನ್, ಹದೀಸ್ ಅನ್ವಯ ಬದುಕುವುದು ಹಾಗೂ ಅದನ್ನು ಪಾಲಿಸುವುದು ತಮ್ಮ ಹಕ್ಕು ಎನ್ನುವುದು ತೀರಾ ಅಪಾಯಕಾರಿಯಾಗಿದೆ. ಇಸ್ಲಾಮಿಕ್ ಮೂಲಭೂತವಾದ ಚಿಗುರೊಡೆಯುತ್ತಿರುವುದರ ಲಕ್ಷಣ ಇದು. ಹದೀಸ್, ಶರಿಯಾತ್, ಕುರಾನ್‌ಗಳು ಬಹುದೇವ ಆರಾಧಕರನ್ನು ಕ್ರೂರವಾಗಿ ಕೊಲ್ಲು ಎನ್ನುತ್ತದೆ. ಅಂದರೆ ಈ ನೆಲದ ಹಿಂದುಗಳನ್ನು ಕ್ರೂರವಾಗಿ ಕೊಲ್ಲುವುದು ಮುಸ್ಲಿಮರ ಮೂಲಭೂತ ಹಕ್ಕಾಗುತ್ತದೆ. ಇದನ್ನು ಒಪ್ಪಿಕೊಳ್ಳಬೇಕೇ ಎಂದು ಪ್ರಶ್ನಿಸಿದರು.
ಭಾರತ ಸಂವಿಧಾನದಡಿಯಲ್ಲಿ ನಡೆಯಬೇಕೇ ವಿನಃ ಇಸ್ಲಾಂ ಧರ್ಮದ ಆದೇಶದಂತೆ ಅಲ್ಲ. ಧಾರ್ಮಿಕ ಹಕ್ಕಿನ ಹೆಸರಿನಲ್ಲಿ ಇಸ್ಲಾಮಿ ರಾಜ್ಯ ಸ್ಥಾಪನೆಗೆ ಅವಕಾಶ ನೀಡಬಾರದು. ಅಂತಹವರಿಗಾಗಿಯೇ 1947ರಲ್ಲಿ ಪ್ರತ್ಯೇಕವಾದ ಇಸ್ಲಾಮಿಕ್ ದೇಶವನ್ನು ಕೊಟ್ಟಾಗಿದೆ. ಮತ್ತೆ ಪ್ರತ್ಯೇಕತೆಯ ಕೂಗು ಏಳದಂತೆ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮಕೈಗೊಂಡು, ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಸಿವಿಲ್ ವಿಷಯಗಳಿಗೆ ಶರೀಯತ್ ಬೇಕು ಎನ್ನುವವರು, ಅದೇ ಶರೀಯತ್ ಕಾನೂನಿನಂತೆ ಭಾರತದಲ್ಲಿ ಸಿಆರ್‌ಪಿಎಫ್ ಜಾರಿಗೆ ಬರಬೇಕು ಅಂತ ಯಾಕೇ ಹೇಳುತ್ತಿಲ್ಲ. ಮುಸ್ಲಿಂ ಕ್ರಿಮಿನಲ್‌ಗಳಿಗೆ ಅದರ ಅನ್ವಯವೇ ಶಿಕ್ಷೆ ಆಗಬೇಕೆಂದು ಯಾಕೇ ಆಗ್ರಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಜನಸಂಖ್ಯೆ ಹೆಚ್ಚಳವೇ ಪ್ರತ್ಯೇಕತೆ ವಾದಿಗಳ ಸೊಕ್ಕಿನ ವರ್ತನೆಗೆ ಕಾರಣವಾಗುತ್ತಿದೆ. ಹಾಗಾಗಿ ಜನಸಂಖ್ಯೆ ನಿಯಂತ್ರಣ ಮಾಡುವ ಕಾನೂನು ಜಾರಿ ಮಾಡಲು ಕೇಂದ್ರ ಸರ್ಕಾರ ತಕ್ಷಣವೇ ಕ್ರಮವಹಿಸಬೇಕು. ಪದೇ ಪದೇ ವಿವಾದ ಎಬ್ಬಿಸುವುದು, ಪ್ರತ್ಯೇಕತೆಯ, ಮತೀಯ ನೆಲೆ ಬೇಡಿಕೆ, ಬ್ಲಾಕ್ ಮೇಲ್ ನೀತಿ ನಿಲ್ಲಿಸಲು ಏಕ ರೂಪ ನಾಗರಿಕ ಸಂಹಿತೆ ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಮೈಸೂರು ವಿಭಾಗ ಪ್ರಧಾನ ಕಾರ್ಯದರ್ಶಿ ಸುಜನ್‌ಗೌಡ, ಪದಾಧಿಕಾರಿಗಳಾದ ಮೋಹನ್, ರಾಜನ್, ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!