ಸಖತ್ ವೈರಲ್ ಆಗ್ತಿದೆ ಮಹಿಳಾ ದಿನಾಚರಣೆಯಲ್ಲಿ ಅಧಿಕಾರಿಗಳ ಭರ್ಜರಿ ಡ್ಯಾನ್ಸ್!

ಹೊಸದಿಗಂತ ವರದಿ ಗದಗ :

ಮಹಿಳಾ ದಿನಾಚರಣೆಯಂದು ಮಹಿಳೆಯರು ವಿಭಿನ್ನ ರೀತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ವಿಶೇಷ. ಆದರೆ ಮಹಿಳಾ ದಿನದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮದ ನಂತರ ಅಧಿಕಾರಿಗಳು ಮಾಡಿದ ಭರ್ಜರಿ ಡ್ಯಾನ್ಸ್ ಈಗ ವೈರಲ್ ಆಗಿದೆ.

ಮಹಿಳಾ ದಿನಾಚರಣೆ ಕಾರ್ಯಕ್ರಮ ಮುಗಿದ ನಂತರ ಇಲಾಖೆಯ ಸಿಬ್ಬಂದಿಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ. ವೈ. ಶೆಟ್ಟೆಪ್ಪನವರು ಭರ್ಜರಿ ಡ್ಯಾನ್ ಮಾಡಿದರು. ಇವರೊಂದಿಗೆ ಇತರೆ ಅಧಿಕಾರಿಗಳು ಎಕ್ಕಾ ಸಕ್ಕಾ ಹಾಡಿಗೆ ವೇದಿಕೆ ಮೇಲೆ ಕುಣಿದ ಕುಪ್ಪಳಿಸಿದರು.

ಅಧಿಕಾರಿಗಳ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗಿದ್ದು, ಅಧಿಕಾರಿಗಳ ಹುಚ್ಚಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡೆಸಿದ್ದಾರೆ. ಕೆಲ ಮಹಿಳಾ ಅಧಿಕಾರಿಗಳು ಉಪನಿರ್ದೇಶಕರಿಗೆ ಡ್ಯಾನ್ಸ್ ಮಾಡುವಂತೆ ಒತ್ತಾಯ ಮಾಡಿದ್ದರಿಂದ ಮಹಿಳಾ ಅಧಿಕಾರಿಗಳ ಒತ್ತಾಯದಂತೆ ವೇದಿಕೆ ಮೇಲೆ ಕುಣಿದಾಡಿದ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!