ಅತ್ಯಾಚಾರ ಸಾಬೀತಾದರೆ ಲಂಕಾ ಕ್ರಿಕೆಟಿಗ ಗುಣತಿಲಕಗೆ 14 ವರ್ಷ ಜೈಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾದಲ್ಲಿ ವಿಶ್ವಕಪ್‌ ಗೆ ಹೋಗಿದ್ದ ವೇಳೆ ಅಲ್ಲಿನ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕಗೆ ಮತ್ತಷ್ಟ ಸಂಕಷ್ಟಗಳು ಎದುರಾಗಿದ್ದು, ಒಂದು ವೇಳೆ ಆರೋಪ ಸಾಬೀತಾದರೆ 14 ವರ್ಷ ಜೈಲುಶಿಕ್ಷೆ ಎದುರಿಸುವ ಭೀತಿಯಲ್ಲಿದ್ದಾರೆ.
ನಡೆದಿದ್ದೇನು?
ವಿಶ್ವಕಪ್‌ ನಲ್ಲಿ ಲಂಕಾ ತಂಡದ ಭಾಗವಾಗಿದ್ದ 31 ವರ್ಷದ ಗುಣತಿಲಕ ನವೆಂಬರ್ 2 ರಂದು ಸಿಡ್ನಿಯ ಒಪೇರಾ ಹೌಸ್ ಬಳಿಯ ಜನಪ್ರಿಯ ಬಾರ್‌ನಲ್ಲಿ ಯುವತಿಯೊಬ್ಬಳನ್ನು ಭೇಟಿಯಾಗಿದ್ದರು. ಅಲ್ಲಿ ಭೇಟಿಯಾಗುವ ಮೊದಲು ಜೋಡಿಯು ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಸಂಪರ್ಕ ಹೊಂದಿದ್ದರು. ಅಲ್ಲಿಂದ ಇಬ್ಬರು ಪ್ರಖ್ಯಾತ ಒಪೆರಾ ಹೌಸ್‌ ಬಳಿ ಇರುವ ಯುವತಿಯ ಮನೆಗೆ ದೋಣಿಯಲ್ಲಿ ಒಟ್ಟಿಗೆ ಹೋಗಿದ್ದಾರೆ. ಅಲ್ಲಿ ಇಬ್ಬರು ಒಟ್ಟಾಗಿ  ಮಧ್ಯ ಸೇವಿಸಿದ ಬಳಿಕ ಗುಣತಿಲಕ ತನ್ನ ಮೇಲೆ 4 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂಬುದು ಮಹಿಳೆಯ ಆರೋಪ. ಈ ವೇಳೆ ಮಹಿಳೆಯು ಕಾಂಡೋಮ್ ಧರಿಸಲು ಗುಣತಿಲಕರನ್ನು ಕೇಳಿದರೂ ಆತ ಧರಿಸಲಿಲ್ಲ. ಜೊತೆಗೆ ಲೈಂಗಿಕ ಸಂಪರ್ಕದ ವೇಳೆ 4 ಬಾರಿ ತನ್ನ ಕತ್ತನ್ನು ಬಲವಾಗಿ ಹಿಡಿದಿದ್ದ ಇದರಿಂದ ತನಗೆ ಸಾವಿನ ಭಯ ಕಾಡಿತ್ತು ಎಂದು ಯುವತಿ ದೂರು ನೀಡಿದ್ದಾಳೆ. ಈ ದೂರು ದಾಖಲಾಗಿಗುತ್ತಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಎಲ್ಲಾ ಮಾದರಿಯ ಕ್ರಿಕೆಟ್‌ ನಿಂದ ಗುಣತಿಲಕರನ್ನು ಅಮಾನತು ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!