ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸಿಎಂ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್ ಮಂಡನೆ ಮಾಡಿದ್ದಾರೆ.
ಬಜೆಟ್ ಮಂಡನೆ ವೇಳೆ ಸಿಎಂ ಸಿನಿಮಾದ ಹಾಡು ಹಾಗೂ ಡೈಲಾಗ್ಸ್ಗಳನ್ನು ಬಳಸಿಕೊಂಡಿದ್ದಾರೆ. ಇದು ಎಲ್ಲರ ಗಮನ ಸೆಳದಿದೆ.
ಬಜೆಟ್ ಮಂಡನೆ ಆರಂಭದಲ್ಲಿಯೇ ಸಿಎಂ ಡಾ. ರಾಜ್ಕುಮಾರ್ ನಟನೆಯ ಬಂಗಾರದ ಮನುಷ್ಯ ಸಿನಿಮಾದ ”ಆಗದು ಎಂದೂ ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕು ಎಂದು” ಹಾಡಿನ ಸಾಲುಗಳನ್ನು ಹೇಳಿದ್ದಾರೆ.
ನಾವು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು ಇಡೀ ವಿಶ್ವ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದೇವೆ ಎನ್ನುವರ್ಥದಲ್ಲಿ ಈ ಹಾಡನ್ನು ಬಳಸಿದ್ದಾರೆ.
ನಂತರ ಡೇರ್ಡೆವಿಲ್ ಮುಸ್ತಫಾ ಸಿನಿಮಾದಲ್ಲಿ ಡಾಲಿ ಧನಂಜಯ್ ಬರೆದ ಸಾಲುಗಳನ್ನು ಓದಿದ್ದಾರೆ. ” ಒಂದು ತೋಟದಲ್ಲಿ ನೂರು ಹೂವು ಅರಳಲಿ, ಎಲ್ಲ ಕೂಡಿ ಆಡುವಂಥ ಗಾಳಿ ಬೀಸಲಿ” ಎನ್ನುವ ಸಾಲುಗಳನ್ನು ಓದಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಅನುದಾನಗಳನ್ನು ಮಂಡಿಸುವುದಕ್ಕೂ ಮುನ್ನ ಇದನ್ನು ಓದಿದ್ದಾರೆ.