ಚಳಿಗಾಲದಲ್ಲಿ ಚಾಕೊಲೇಟ್ ಕಾಫಿ ಕುಡಿಯುವ ಮಜವೇ ಬೇರೆ! ಮಾಡೋದು ಸಹ ಎಷ್ಟು ಈಸಿ ಗೊತ್ತಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಾಫಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ವಿಶೇಷವಾಗಿ ಚಳಿಗಾಲದಲ್ಲಿ ಕಾಫಿ ನೀಡುವ ಮಜವನ್ನು ಕಾಫಿಫ್ರಿಯರು ಮಿಸ್‌ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಈ ಬಾರಿ ನೀವು ಅದರಲ್ಲಿ ವಿಶೇಷತೆಯೊಂದನ್ನು ಪ್ರಯತ್ನಿಸಿ. ಒಂದು ಕಪ್ ಬಿಸಿ ಡಾರ್ಕ್ ಚಾಕೊಲೇಟ್ ಕಾಫಿ ನಿಮಗೆ ಮತ್ತಷ್ಟು ಉತ್ಸಾಹವನ್ನು ತರಬಹುದು! ಒಮ್ಮೆ ಪ್ರಯತ್ನಿಸಿ ನೋಡಿ.

ಕಾಫಿ ತಯಾರಿಗೆ ಇವೆಲ್ಲಾ ಪದಾರ್ಥಗಳು ಬೇಕು:
ಡಾರ್ಕ್ ಚಾಕೊಲೇಟ್ ಕಾಫಿ‌ ತಯಾರಿಗೆ 100 ಗ್ರಾಂ ಡಾರ್ಕ್ ಚಾಕೊಲೇಟ್, 1 ಕಪ್ ನೀರು, 1 ಕಪ್ ಹಾಲು, 4 ಟೀಸ್ಪೂನ್ ಕಾಫಿ ಪುಡಿ, 2 ಟೀಸ್ಪೂನ್ ಸಕ್ಕರೆ ಇಷ್ಟಿದ್ದರೆ ಸಾಕು!.

ಇದನ್ನು ಮಾಡೋದು ಎಷ್ಟು ಈಸಿ ಗೊತ್ತಾ!
ಮೊದಲಿಗೆ ನೀರು ಕಾಫಿಪುಡಿ ಹಾಕಿ ಕುದಿಸುವ ಮೂಲಕ ತಯಾರಿ ಪ್ರಾರಂಭಿಸಿ. ಕಾಫಿ ಕೊತಕೊತ ಎಂದು ಕುದಿಯತೊಡಗಿದಾಗ ಡಾರ್ಕ್ ಚಾಕೊಲೇಟ್ ಅನ್ನು ಅದರ ಮೇಲೆ ಸುರಿಯಿರಿ. ಬಿಸಿಬಿಸಿಯಾದ ಕಾಫಿ ಡಾರ್ಕ್ ಚಾಕೊಲೇಟ್ ಅನ್ನು ತನ್ನೊಳಗೆ ಕರಗಿಸಿಕೊಳ್ಳುತ್ತದೆ. ಈಗ ಕಾಫಿ ಮತ್ತು ಚಾಕೊಲೇಟ್‌ ನ ನಡುವೆ ಬಿಸಿ ಹಾಲನ್ನು ಸುರಿಯಿರಿ. ಆ ಬಳಿಕ ಚಾಕೊಲೇಟ್ ಕರಗುವ ತನಕ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆಯನ್ನು ಸೇರಿಸಿ ಮತ್ತು ಸಕ್ಕರೆ ಕರಗುವ ತನಕ ಮಿಶ್ರಣ ಮಾಡಿ. ಅಲ್ಲಿಗೆ ನಿಮ್ಮ ಡಾರ್ಕ್ ಚಾಕೊಲೇಟ್ ಕಾಫಿ ಸಿದ್ಧವಾಗಿದೆ ನೋಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!