October 8, 2026
Thursday, October 8, 2026
spot_img

ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ ಸೀಸನ್-3ಗೆ ಚಾಲನೆ ನೀಡಿದ ಡಾರ್ಲಿಂಗ್‌ ಕೃಷ್ಣ, ಐಂದ್ರಿತಾ ರೈ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಗಾಯತ್ರ ವಿಹಾರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕರ್ನಾಟಕ ಸಾಫ್ಟ್‌ ಬಾಲ್‌ ಪ್ರೀಮಿಯರ್‌ ಲೀಗ್‌ ಸೀಸನ್‌ -೩ಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ನಟ ಡಾರ್ಲಿಂಗ್‌ ಕೃಷ್ಣ ಹಾಗೂ ನಟಿ ಐಂದ್ರಿತಾ ರೈ ಸೀಸನ್‌-3 ಗೆ ಚಾಲನೆ ನೀಡಿದ್ದಾರೆ.

ಕ್ರಿಕೆಟ್‌ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ? ಆಟಾಡೋಕೆ ಬರೋದಿಲ್ಲ ಅನ್ನುವವರು ಕೂಡ ನೋಡೋಕೆ ಇಷ್ಟಪಡ್ತಾರೆ. ಉತ್ತಮ ಪ್ರತಿಭೆಗಳನ್ನು ಹುಡುಕಿ ಜಗತ್ತಿಗೆ ತೋರಿಸುವ ಕಾರ್ಯವನ್ನು ಕೆಎಸ್‌ಪಿಎಲ್ ತಂಡ ಕೈಗೊಂಡಿರುವುದು ಶ್ಲಾಘನೀಯ ಎಂದು ಡಾರ್ಲಿಂಗ್‌ ಕೃಷ್ಣ ಹೇಳಿದ್ದಾರೆ.

ನಟಿ ಐಂದ್ರಿತಾ ರೇ ಮಾತನಾಡಿ, ಕ್ರಿಕೆಟ್‌ಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭಾವಂತರಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುವುದು ಮುಖ್ಯ. ಅಂತಹ ಅವಕಾಶ ಒದಗಿಸಿರುವ ಕೆಎಸ್‌ಪಿಎಲ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಲೀಗ್ ಪಂದ್ಯದಲ್ಲಿ ಆಡಲಿರುವ 32 ತಂಡಗಳು ಭಾಗವಹಿಸಿದ್ದವು. ಒಟ್ಟು 63 ಪಂದ್ಯಗಳು ನಡೆಯಲಿವೆ.

Must Read