ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನ ಚಾರ್ಜ್‌ಶೀಟ್‌ನಲ್ಲಿ ಇರುವ ವಿಷಯಗಳು ಒಂದೊಂದೆ ಹೊರಬರುತ್ತಿವೆ. ನಟ ದರ್ಶನ್ ರೇಣುಕಾಸ್ವಾಮಿ ಮರ್ಡರ್ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದಾರೆ.
ದರ್ಶನ್ ಪ್ರಾರಂಭದ ತನಿಖಾ ಹಂತದಲ್ಲಿ ತಾನೇನು ಮಾಡಿಲ್ಲ ಎನ್ನುತ್ತಿದ್ದರು. ಆದರೆ ಸಾಕ್ಷಿ ಸಮೇತ ಪೊಲೀಸರು ದರ್ಶನ್‌ನ ವಿಚಾರಣೆ ಮಾಡಿದಾಗ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾರೆ. ಶೂ ಕಾಲಿನಲ್ಲಿ ರೇಣುಕಾ ಸ್ವಾಮಿ ಎದೆ ಮೇಲೆ ಕಾಲಿಟ್ಟಿದ್ದಾಗಿ, ಎಡಗಿವಿಯನ್ನು ಹೊಸಕಿದ್ದು ಹಾಗೂ ಮರ್ಮಾಂಗದ ಮೇಲೆ ಕಾಲಿಟ್ಟು ತುಳಿದ ಬಗ್ಗೆ ತಪ್ಪೊಪ್ಪಿಗೆ ಮಾಡಿದ್ದಾರೆ ಎನ್ನಲಾಗಿದೆ.
ದರ್ಶನ್ ಹೇಳಿಕೆಗೆ ಪೂರಕವಾಗಿ ರೇಣುಕಾಸ್ವಾಮಿ ಪಕ್ಕೆಲಬು ಮುರಿದಿತ್ತು. ವೃಷಣಕ್ಕು ಹಾನಿಯಾಗಿರೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಜತೆಗೆ ರೇಣುಕಾಸ್ವಾಮಿಗೆ ಒಂಟಿ ವೃಷಣವಿರುವ ಇರುವ ಸಂಗತಿಯು ಬೆಳಕಿಗೆ ಬಂದಿದೆ. ಅದನ್ನು ರೇಣುಕಾಸ್ವಾಮಿಯ ತಾಯಿಯೂ ದೃಢಪಡಿಸಿದ್ದಾರೆ. ಹುಟ್ಟಿನಿಂದಲೇ ಒಂಟಿ ವೃಷಣ ವೈಫಲ್ಯದಿಂದ ರೇಣುಕಾಸ್ವಾಮಿ ಜನಿಸಿದ್ದ. ತನಿಖಾಧಿಕಾರಿಗಳು ಎಲ್ಲವನ್ನೂ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.