SHOCKING | ಹೆತ್ತ ತಾಯಿಯ ಕತ್ತು ಕುಯ್ದು ಕೊಲೆಗೈದ ಪಾಪಿ ಮಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಗ ತನ್ನ ಹೆತ್ತ ತಾಯಿಯ ಕತ್ತು ಕುಯ್ದು ಕೊಲೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಗರಾಳಗುಟ್ಟೆ ಬಳಿ ನಡೆದಿದೆ.

ರತ್ನಮ್ಮ (56) ಕೊಲೆಯಾದ ಮಹಿಳೆ. ಗಂಗರಾಜು ತಾಯಿಯನ್ನೇ ಕೊಂದ ಮಗ.

ತಾಯಿ-ಮಗನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಕೋಪದಲ್ಲಿ ಗಂಗರಾಜು ಚಾಕುವಿನಿಂದ ತಾಯಿಯ ಕತ್ತು ಸೀಳಿ ಕೊಲೆಗೈದಿದ್ದಾನೆ. ಕೃತ್ಯದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!