ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಯಾವಾಗಲೂ ದರ್ಶನ್ ಪರವಾಗಿ ಇದ್ದೇನೆ, ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ ಎಂದು ಮಾಜಿ ಸಂಸದೆ ಸುಮಲತಾ ಹೇಳಿದ್ದಾರೆ.
ದರ್ಶನ್ ಆರೋಗ್ಯ ಮತ್ತು ಕೊಲೆ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿಜಯಲಕ್ಷ್ಮಿ ಜೊತೆ ಸಂಪರ್ಕದಲ್ಲಿದ್ದೇನೆ. ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ದರ್ಶನ್ ಮುಂದೆ ಹಲವು ಸವಾಲುಗಳಿವೆ. ಇನ್ನೂ ಅವರಿಗೆ ಟ್ರೀಟ್‌ಮೆಂಟ್ ಬೇಕು, ಆರೋಗ್ಯ ಸರಿಪಡಿಸಿಕೊಳ್ಳಬೇಕು. ದರ್ಶನ್‌ಗೆ ಬೇಲ್ ಬಗ್ಗೆ ಲೀಗಲ್ ಚಾಲೆಂಜ್ಸ್ ಇದೆ. ಅದನ್ನೆಲ್ಲಾ ಸರಿಪಡಿಸಿಕೊಂಡು ಹೊರಗಡೆ ಬರುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದೇವೆ ಎಂದರು.
ನನ್ನ ನಿಲುವು ಏನು ಎಂಬುದನ್ನ ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದೇನೆ. ನಮ್ಮ ಸಂಬಂಧ ಏನಿದೆ ಅದು ಇನ್ನುಂದೆಯೂ ಹಾಗೆ ಇರುತ್ತದೆ. ನನ್ನ ಲೈಫ್ ಇರುವವರೆಗೂ ದರ್ಶನ್ ನನ್ನ ಮಗನೇ. ಕೇಸ್ ಕುರಿತು ನಿಜಾಂಶ ಏನಿದೆ ಅದು ಹೊರಗೆ ಬರಬೇಕು. ನಿರಾಪರಾಧಿ ಅಂತಾ ಸಾಬೀತು ಆಗಲಿ ಎಂಬುದು ನನ್ನ ಆಸೆ. ದರ್ಶನ್ ಪರ ವಕೀಲರು ನಿಜಾಂಶವನ್ನು ಪ್ರೂವ್ ಮಾಡುತ್ತಾರೆ ಎಂಬ ನಂಬಿಕೆಯಿದೆ. ಇದೆಲ್ಲಾ ಸರಿಯಾಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದರು.
ಈ ಕೇಸ್ ಬಗ್ಗೆ ಲೀಗಲ್ ವಿಚಾರಗಳು ನಮಗೆ ಗೊತ್ತಾಗಲ್ಲ. ಆದರೆ ವಿಜಯಲಕ್ಷ್ಮಿ ಎಲ್ಲಾ ರೀತಿಯ ಎಫರ್ಟ್ ಹಾಕುತ್ತಿದ್ದಾರೆ. ಇನ್ನೂ ದರ್ಶನ್‌ಗೆ ಬೆನ್ನು ನೋವು ತುಂಬಾ ಇದೆ. ಸರ್ಜರಿ ಮಾಡಿಸಿಕೊಳ್ಳಲು ಇಷ್ಟ ಇಲ್ಲ ಅಂತ ವಿಚಾರ ಕೇಳಿದೆ. ಸರ್ಜರಿ ಮಾಡಿಸಿದ್ರೆ ರಿಕವರಿ ಟೈಮ್ ಜಾಸ್ತಿ ಬೇಕು. ಈಗಾಗಲೇ ಶೂಟಿಂಗ್ ಕೂಡ ಅರ್ಧಕ್ಕೆ ನಿಂತಿದೆ. ಸಿನಿಮಾರಂಗ ಕೂಡ ತುಂಬಾ ನಷ್ಟ ಅನುಭವಿಸುತ್ತಿದೆ. ಹಾಗಾಗಿ ಇದೆಲ್ಲಾ ಸರಿಹೋಗಲಿ ಎಂದು ಆಶಿಸುತ್ತೇವೆ ಎಂದರು.
ಅಭಿಷೇಕ್ ಕೂಡ ದರ್ಶನ್‌ನ ಜೈಲಿನಲ್ಲಿ ಮಾತ್ರ ಭೇಟಿ ಮಾಡಿದ್ದಾನೆ. ಈ ಎಲ್ಲದರಿಂದ ದರ್ಶನ್ ಗೆದ್ದು ಬರಬೇಕು. ದರ್ಶನ್ ಕನ್ನಡ ಚಿತ್ರರಂಗಕ್ಕೆ ಬಿಗ್ಗೇಸ್ಟ್ ಪಿಲ್ಲರ್. ಕಳೆದ ವರ್ಷ ಅವರು ಕಾಟೇರ ಹಿಟ್ ಕೊಟ್ಟಿದ್ದಾರೆ. ಅವರು ಇಲ್ಲದೆ ನಿರ್ಮಾಪಕ ಎಲ್ಲರೂ ಗೊಂದಲದಲ್ಲಿ ಇದ್ದಾರೆ. ಇಂತಹ ನಟನಿಗೆ ಆದಂತಹ ತೊಂದರೆಯಿಂದ ಇಡೀ ಚಿತ್ರರಂಗಕ್ಕೆ ಶಿಕ್ಷೆ ಆಗುತ್ತಿದೆ. ಈ ಕೊಲೆ ಪ್ರಕರಣ ವಿಚಾರ ಎಲ್ಲರಿಗೂ ನೋವಾಗಿದೆ. ದರ್ಶನ್ ಹೇಗೆ ಅಂತ ನನಗೆ ಗೊತ್ತು. ಅವರು ಒಳ್ಳೆಯ ಗುಣಗಳು ಇರುವ ವ್ಯಕ್ತಿ. ಅವರೀಗ ನೋವು ಅನುಭವಿಸುತ್ತಿದ್ದಾರೆ. ತಾಯಿಯಾಗಿ ನಾನು ಏನು ಹೇಳಬೇಕೋ ವೈಯಕ್ತಿಕವಾಗಿ ಅವರಿಗೆ ಹೇಳುತ್ತೇನೆ ಎಂದು ಹೇಳಿದರು.