ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡ್ ಲೋಕಸಭಾ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಕೇರಳ ಸಿಎಂ, ಕಾಂಗ್ರೆಸ್‌ನ ಜಾತ್ಯತೀತ ಮುಖವಾಡ ಬಯಲಾಗಿದೆ . ಪ್ರಿಯಾಂಕಾ ಗಾಂಧಿ ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಸ್ಪರ್ಧೆ ಮಾಡ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನಿಲುವೇನು? ಅವರ ಸಿದ್ಧಾಂತ ಪ್ರಜಾಪ್ರಭುತ್ವದ ಜೊತೆ ಹೊಂದಾಣಿಕೆ ಆಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಜಮಾತ್-ಎ-ಇಸ್ಲಾಮಿ ದೇಶ ಅಥವಾ ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ, ರಾಷ್ಟ್ರದ ಆಡಳಿತ ರಚನೆಯನ್ನು ಕಡೆಗಣಿಸುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಹಳ ಹಿಂದಿನಿಂದಲೂ ಚುನಾವಣೆಗಳನ್ನು ವಿರೋಧಿಸುತ್ತಾ ಬಂದಿದೆ. ಹಿಂದೆ ಕಾಶ್ಮೀರದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ದೂರಿದ್ದಾರೆ.
ವಯನಾಡಿನಲ್ಲಿರುವ ಜಮಾತ್-ಎ-ಇಸ್ಲಾಮಿ ಜಮ್ಮು-ಕಾಶ್ಮೀರದಲ್ಲಿರುವ ಸಂಘಟನೆಗಿಂತ ಭಿನ್ನ ಎಂದು ಹೇಳಿಕೊಳ್ಳುತ್ತೆ. ಆದ್ರೆ ಸಿದ್ಧಾಂತ ಒಂದೇ ಅಲ್ಲವೇ ಅಂತ ಕಿಡಿಕಾರಿದ್ದಾರೆ.
ಜಾತ್ಯತೀತತೆ ಪರವಾಗಿ ನಿಲ್ಲುವವರು ಎಲ್ಲಾ ರೀತಿಯ ಮತೀಯತೆಯನ್ನು ವಿರೋಧಿಸಬೇಕಲ್ಲವೇ? ಆದ್ರೆ ಕಾಂಗ್ರೆಸ್‌ನಿಂದ ಜಮಾತ್ ಎ ಇಸ್ಲಾಮಿಯನ್ನು ವಿರೋಧಿಸಲು ಸಾಧ್ಯವಿಲ್ಲ. ಏಕೆಂದರೆ ಅದರ ಬೆಂಬಲದೊಂದಿಗೆ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಇಸ್ಲಾಮಿಯೊಂದಿಗೆ ಮೈತ್ರಿ ಉಳಿಸಿಕೊಳ್ಳಲು ತ್ಯಾಗ ಮಾಡುತ್ತಿರುವಂತೆ ತೋರುತ್ತದೆ ಎಂದು ಕುಟುಕಿದ್ದಾರೆ.