ಅಭಿ ವೆಡ್ಡಿಂಗ್ ಪಾರ್ಟಿಯಲ್ಲಿ ಅವಿವಾ ಮುಂದೆ ಮಂಡಿಯೂರಿ ವಿಶೇಷ ಮನವಿ ಮಾಡಿಕೊಂಡ ದರ್ಶನ್!

ಹೊಸದಿಂಗತ ಡಿಜಿಟಲ್‌ ಡೆಸ್ಕ್:‌

ಸ್ಯಾಂಡಲ್ ವುಡ್ ನಟ ಅಭಿಷೇಕ್ ಅಂಬರೀಶ್- ಅವಿವಾ ಬಿದ್ದಪ್ಪ ಮದುವೆ, ಆರತಕ್ಷತೆ ಕಾರ್ಯಕ್ರಮದಬಳಿಕ ಅದ್ಧೂರಿ ಸಂಗೀತ್ ಪಾರ್ಟಿ ನಡೆದಿದೆ.

ಬೆಂಗಳೂರಿನ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದರ್ಶನ್, ಯಶ್, ರಮ್ಯಾಕೃಷ್ಣ, ಮಾಲಾಶ್ರೀ, ಗುರುಕಿರಣ್, ಜಯಪ್ರದಾ, ಶಿವಣ್ಣ, ಪ್ರಭುದೇವಾ ಸೇರಿದಂತೆ ಹಲವರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು.

ಸೂಪರ್ ಹಿಟ್ ಸಾಂಗ್ಸ್‌ಗೆ ವೇದಿಕೆ ಮೇಲೆ ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸುಮಲತಾ ಅಂಬರೀಶ್ ಜೊತೆ ಸೇರಿ ಕುಣಿದು ಎಂಜಾಯ್ ಮಾಡಿದ್ದಾರೆ.

ಅಣ್ಣಾವ್ರ ಹಿಟ್ ಸಾಂಗ್ಸ್‌ಗೆ ಅಭಿಷೇಕ್, ತಾಯಿ ಸುಮಲತಾ ಜೊತೆ ಹೆಜ್ಜೆ ಹಾಕಿದ್ದರೆ , ಇತ್ತ ಜೂನಿಯರ್, ಸೀನಿಯರ್ ಎಂದು ದರ್ಶನ್- ಅಭಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಮಾಲಾಶ್ರೀ, ರಮ್ಯಾಕೃಷ್ಣ ಎಲ್ಲರೂ ವೇದಿಕೆ ಮೇಲೆ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ಖುಷಿಪಟ್ಟಿದ್ದಾರೆ.

ಕಾರ್ಯಕ್ರಮದ ಕೊನೆಯಲ್ಲಿ ನವ ಜೋಡಿಗೆ ದರ್ಶನ್ ಹಾಗೂ ಯಶ್ ಪ್ರೀತಿಯಿಂದ ಬುದ್ಧಿ ಮಾತು ಹೇಳಿದರು.

ಅವಿವಾ ಮಂಡಿವೂರಿದ ದರ್ಶನ್
ಇಬ್ಬರು ಅನ್ಯೋನ್ಯವಾಗಿ ಜೀವನ ಸಾಗಿಸಿಕೊಂಡು ಹೋಗುವಂತೆ ದರ್ಶನ್ ಕಿವಿಮಾತು ಹೇಳಿದರು. ಅಂಬಿ ರೀತಿಯ ತಂದೆ ಸಿಗೋಕೆ ಯಾರಿಗೂ ಸಾಧ್ಯವಿಲ್ಲ. ಆ ಫ್ಯಾಮಿಲಿಗೆ ನೀನು ಹೋಗ್ತಿದ್ದಿಯಾ, ಎಲ್ಲಾ ಹೊಣೆ ನಿನ್ನದೇ, ನಮ್ಮ ಮನೆಯಲ್ಲಿ ಏನೇ ತೊಂದರೆಯಾದರೂ ಚೆನ್ನಾಗಿರಲ್ಲ. ಇನ್ನು ನನ್ನ ಕಳಕಳಿಯ ಮನವಿ. ಅಭಿ ಏನಾದರೂ ತಪ್ಪುಯ ಮಾಡಿದರೆ ನನಗೆ ಹೇಳು, ನಾನು ನೋಡಿಕೊಳ್ತೀನಿ. ಅಂಬರೀಶ್ ಎನ್ನುವ ಹೆಸರಿಗೆ ಯಾವತ್ತು ಧಕ್ಕೆ ತರಬೇಡ ಎಂದು ಅವಿವಾ ಬಳಿ ಮಂಡಿಯೂರಿ ಕೇಳಿಕೊಂಡಿದ್ದಾರೆ.

ಅಭಿಗೆ ಯಶ್ ಸ್ವೀಟ್ ವಾರ್ನಿಂಗ್
ಬಳಿಕ ಯಶ್ ಅಭಿ, ಅವಿವಾ ಇಬ್ಬರನ್ನು ಬಳಿಗೆ ಕರೆದು “ದರ್ಶನ್ ಸರ್, ನಮ್ಮ ಹುಡುಗಿಗೆ ಹೇಳಿದರು, ಆದರೆ ಮೊದಲು ನಿನಗೆ ಹೇಳಬೇಕು. ನಮ್ಮ ಮನೆಗೆ ಒಂದು ಹುಡುಗಿ ಬಂದಿದೆ. ಲಕ್ಷ್ಮಿ ಬಂದಿದೆ. ನೋಡಮ್ಮ ನೀನು ಏನೇ ಮಾಡಿದರು, ನಿನ್ನ ತಪ್ಪಿರಲ್ಲ, ಇವನದ್ದೇ ತಪ್ಪು. ಅದು ನಮ್ಮ ಗ್ಯಾರೆಂಟಿ. ಮೊದಲು ನಿನಗೆ ಹೇಳಬೇಕುಎಂದು ಅಭಿಗೆ ಯಶ್ ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!