October 9, 2026
Friday, October 9, 2026
spot_img

ಬಡ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಹಣವನ್ನು ಫ್ಯಾಮಿಲಿ ಅಕೌಂಟ್‌ಗೆ ಹಾಕಿಕೊಂಡ ಡಾಟಾ ಆಪರೇಟರ್‌!

ಹೊಸದಿಗಂತ ವರದಿ ಹುಬ್ಬಳ್ಳಿ:

ಇಲ್ಲಿಯ ಪ್ರೀಯದರ್ಶಿನಿ ಕಾಲೋನಿಯಲ್ಲಿರುವ ಕಾರ್ಮಿಕ ಭವನದಲ್ಲಿ ಡಾಡಾ ಎಂಟ್ರಿ ಅಪರೇಟರ್(ಡಿಇಒ) ಬಡ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಹಣವನ್ನು ಫಲಾನುಭವಿಗಳಿಗೆ ನೀಡದೇ ತನ್ನ ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಎಂಟು ಲಕ್ಷ ವರ್ಗಾಯಿಸಿ ವಂಚಿಸಿರುವ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಾಟಾ ಎಂಟ್ರಿ ಅಪರೇಟರ್ ಪುನೀತ್ ಹಾವನೂರ, ತಾಯಿ ಜಯಶ್ರೀ ಹಾಗೂ ಸಹೋದರಿ ದೃಷ್ಟಿತಾ ಎಂಬುವರ ವಿರುದ್ಧ ಅಧಿಕಾರಿ ಮಾರಿಕಾಂಬ ಹುಲಕೋಟಿ ಎಂಬುವರು ದೂರು ನೀಡಿದ್ದಾರೆ.

2023-24 ನೇ ಸಾಲಿನ ಬಡ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ನೀಡಬೇಕಾದ ಹಣವನ್ನು ತಮ್ಮ ತಾಯಿ ಹಾಗೂ ಸಹೋದರಿ ಅವರ ಹೆಸರು ಸೇರಿಸಿ ಅವರ ಬ್ಯಾಂಕ್ ಖಾತೆಗೆ ಎಂಟು ಲಕ್ಷ ಹಾಕಿ ವಂಚಿಸಿ ಸರ್ಕಾರ ಹಣ ದುರ್ಬಳಕೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read