ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತೆ ಅಮ್ಮನವರ ಅವತಾರ ಎತ್ತಿ ಅಭಿಮಾನಿಗಳಿಗೆ ದರುಶನ ಕೊಡೋಕೆ ರೆಡಿಯಾಗಿದ್ದಾರೆ. ಹೌದು, ಸೂಪರ್ ಹಿಟ್ ಆಗಿದ್ದ ‘ಮೂಕುತಿ ಅಮ್ಮನ್’ ಸಿನಿಮಾದ ಸೀಕ್ವೆಲ್ ಅಂದರೆ ‘ಮೂಕುತಿ ಅಮ್ಮನ್ 2’ ಕೆಲಸಗಳು ಭರದಿಂದ ಸಾಗ್ತಿದ್ದು, ಪ್ರಸಿದ್ಧ ಸಿನಿಮಾ ಟ್ರ್ಯಾಕರ್ ಶ್ರೀಧರ್ ಪಿಳ್ಳೈ ನೀಡಿರೋ ಮಾಹಿತಿ ಪ್ರಕಾರ, ಈ ಸಿನಿಮಾ 2026ರ ದೀಪಾವಳಿ ಹಬ್ಬಕ್ಕೆ ಥಿಯೇಟರ್‌ಗಳಲ್ಲಿ ಧಮಾಕಾ ಎಬ್ಬಿಸಲು ಪ್ಲಾನ್ ಮಾಡ್ತಿದೆಯಂತೆ.

ಮೊದಲ ಭಾಗದಲ್ಲಿ ಆರ್‌ಜೆ ಬಾಲಾಜಿ ನಿರ್ದೇಶನ ಇತ್ತು. ಆದ್ರೆ ಈ ಬಾರಿ ಆ ಸೀಟ್‌ನಲ್ಲಿ ತಮಿಳು ಚಿತ್ರರಂಗದ ಕಾಮಿಡಿ ಮತ್ತು ಮಾಸ್ ಡೈರೆಕ್ಟರ್ ಸುಂದರ್ ಸಿ ಕುಳಿತಿದ್ದಾರೆ. ಸುಂದರ್ ಸಿ ಕಾಮಿಡಿ, ಹಾರರ್, ಎಂಟರ್‌ಟೇನ್‌ಮೆಂಟ್ ಜೊತೆ ನಯನತಾರಾ ಅವರ ದೈವಿಕ ಲುಕ್ ಸೇರಿದ್ರೆ ಥಿಯೇಟರ್‌ನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗೋದ್ರಲ್ಲಿ ಅನುಮಾನವೇ ಇಲ್ಲ.
ನಿಮಗೆ ನೆನಪಿರಬಹುದು, 2020ರಲ್ಲಿ ಬಂದಿದ್ದ ‘ಮೂಕುತಿ ಅಮ್ಮನ್’ ಮೊದಲ ಭಾಗ ನೇರವಾಗಿ OTTಯಲ್ಲಿ ರಿಲೀಸ್ ಆಗಿ ಧೂಳ್ ಎಬ್ಬಿಸಿತ್ತು. ನಕಲಿ ಸಾಮೀಜಿಗಳ ಮುಖವಾಡ ಕಳಚುವ ಕಥೆಯನ್ನಿಟ್ಟುಕೊಂಡು, ನಗು ಮತ್ತು ಭಕ್ತಿ ಎರಡನ್ನೂ ಮಿಕ್ಸ್ ಮಾಡಿ ಸೃಷ್ಟಿಸಿದ್ದ ಆ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಊರ್ವಶಿ, ಸ್ಮೃತಿ ವೆಂಕಟ್, ಅಜಯ್ ಘೋಷ್ ಸೇರಿದಂತೆ ದೊಡ್ಡ ತಾರಾಗಣವೇ ಇತ್ತು.

ಈ ಬಾರಿ ಕಥೆ ಇನ್ನು ದೊಡ್ಡ ಮಟ್ಟದಲ್ಲಿ ಮೂಡಿಬರ್ತಿದ್ದು, ಈ ಸೀಕ್ವೆಲ್ ಒಟಿಟಿಯಲ್ಲಿ ಅಲ್ಲ, ನೇರವಾಗಿ ಬೆಳ್ಳಿಪರದೆ ಮೇಲೆಯೇ ಅಪ್ಪಳಿಸಲಿದೆ. ಈಗಾಗಲೇ ಜಿಯೋಹಾಟ್‌ಸ್ಟಾರ್ ಜೊತೆ ಭಾರಿ ಮೊತ್ತದ OTT ಡೀಲ್ ಕೂಡ ಮುಗಿದಿದೆಯಂತೆ. ಸಿನಿಮಾ ಟೀಮ್‌ನಿಂದ ಅಧಿಕೃತ ಅನೌನ್ಸ್‌ಮೆಂಟ್ ಒಂದೇ ಬಾಕಿ ಇದ್ದು, ಫ್ಯಾನ್ಸ್ ಮಾತ್ರ ನಯನತಾರಾ ಅವರ ಈ ಹೊಸ ಅವತಾರ ನೋಡೋಕೆ ಕಾದು ಕುಳಿತಿದ್ದಾರೆ. ದೀಪಾವಳಿ ಹಬ್ಬಕ್ಕೆ ನಯನತಾರಾ ಅವರ ಮೂಕುತಿ ಅಮ್ಮನ್ ಯಾವ ಮಟ್ಟಕ್ಕೆ ಕಮಾಲ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.



