August 29, 2026
Saturday, August 29, 2026
spot_img

ನಾಲ್ಕು ತಿಂಗಳ ಬಳಿಕ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್: ಜುಲೈನಲ್ಲಿ ಅಂತಿಮ ವಿದಾಯಕ್ಕೆ ಸಜ್ಜಾದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ಹಿನ್ನೆಲೆ ನಾಲ್ಕು ತಿಂಗಳ ಕಾಲ ಮುಂದೂಡಲ್ಪಟ್ಟಿದ್ದ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ಇರಾನ್ ಸರ್ಕಾರ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜುಲೈ 4ರಿಂದ ಅಂತಿಮ ವಿಧಿವಿಧಾನಗಳು ಆರಂಭವಾಗಲಿವೆ.

ಜುಲೈ 9ರಂದು ಅಂತಿಮ ಸಂಸ್ಕಾರ

ಫೆಬ್ರವರಿ 28ರಂದು ನಡೆದ ವೈಮಾನಿಕ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು ಎನ್ನಲಾಗಿದ್ದು, ಭದ್ರತಾ ಕಾರಣಗಳಿಂದ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಜುಲೈ 4 ಮತ್ತು 5ರಂದು ಟೆಹ್ರಾನ್‌ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯಲಿವೆ. ಜುಲೈ 6ರಂದು ರಾಜಧಾನಿಯಲ್ಲಿ ಅಂತಿಮ ಮೆರವಣಿಗೆ ನಡೆಯಲಿದ್ದು, ಬಳಿಕ ಪವಿತ್ರ ನಗರ ಕೋಮ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದನ್ನೂ ಓದಿ:

ಅಂತಿಮವಾಗಿ ಜುಲೈ 9ರಂದು ಈಶಾನ್ಯ ಇರಾನ್‌ನ ಮಶ್ಹದ್ ನಗರದಲ್ಲಿರುವ ಇಮಾಮ್ ರೆಜಾ ಮಸೀದಿಯಲ್ಲಿ ಖಮೇನಿ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಪ್ರಮುಖ ನಾಯಕರು ಹಾಗೂ ಧಾರ್ಮಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !