ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿತಿ ಹಾಗೂ ಪ್ರಭಾಸ್ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡಿತ್ತು.
ಆದಿಪುರುಷ್ ಸಿನಿಮಾದಲ್ಲಿ ಒಟ್ಟಿಗೇ ನಟಿಸಿದ್ದ ಜೋಡಿ ಡೇಡಿಂಗ್‌ನಲ್ಲಿತ್ತು ಎನ್ನಲಾಗಿದೆ. ಆದರೆ ಈ ಬಗ್ಗೆ ಯಾರೂ ಸ್ಪಷ್ಟನೆ ನೀಡಿಲ್ಲ.
ರಿಯಾಲಿಟಿ ಶೋ ಒಂದರಲ್ಲಿ ವರುಣ್ ಧವನ್ ಕ್ರಿತಿ ಹಾಗೂ ಪ್ರಭಾಸ್ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದರು. ಕೃತಿ ಯಾರೋ ಒಬ್ಬರ ಮನಸ್ಸಿನಲ್ಲಿ ಇದ್ದಾಳೆ. ಅವರು ಮುಂಬೈನಲ್ಲಿ ಇಲ್ಲ, ದೀಪಿಕಾ ಜೊತೆ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ ಎಂದು ಹೇಳಿದ್ದರು.
ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅಭಿಮಾನಿಗಳು ಇನ್ನೇನು ಮದುವೆ ಡೇಟ್ ಅನೌನ್ಸ್ ಮಾಡುತ್ತಾರೆ ಎಂದುಕೊಂಡಿದ್ದರು. ಆದರೆ ಕ್ರಿತಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಾನು ವರುಣ್ ಮಾಡಿದ ತಮಾಷೆ ಕೈ ಮೀರಿತ್ತು. ನೀವೇ ನನ್ನ ಮದುವೆ ಡೇಟ್ ಅನೌನ್ಸ್ ಮಾಡುವ ಮುನ್ನ ನಾನೇ ಹೇಳ್ತಿದ್ದೇನೆ ಇದ್ಯಾವುದಕ್ಕೂ ಸಾಕ್ಷಿ ಇಲ್ಲ. ಇದು ರೂಮರ‍್ಸ್ ಅಷ್ಟೆ ಎಂದಿದ್ದಾರೆ.