ಅಜ್ಜಿ….ನೀವು ಸೂಪರ್! 80ರ ಹರೆಯದ ವೃದ್ಧೆಯ ಸಾಧನೆ: 100 ಮೀಟರ್ ಓಟವನ್ನು 49 ಸೆಕೆಂಡ್‌ಗಳಲ್ಲಿ ಪೂರ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದಲ್ಲಿ 80 ವರ್ಷದ ಇಳಿವಯಸ್ಸಲ್ಲೂ ಯಾಋಇಗೂ ಕಮ್ಮಿ ಇಲ್ಲ ಎಂಬಂತೆ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ್ದಾರೆ ಈ ವೃದ್ದೆ. ಮೀರತ್‌ನಲ್ಲಿ ಓಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೀರತ್‌ನಲ್ಲಿ ಆಯೋಜನೆಗೊಂಡಿದ್ದ 100 ಮೀಟರ್ ಓಟದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಜೊತೆಗೆ 80 ವರ್ಷದ ವೃದ್ದೆ ಸೀರೆ ಧರಿಸಿ ರನ್ನಿಂಗ್ ಟ್ರ್ಯಾಕ್ ಶೂ ಧರಿಸಿ ಭಾಗವಹಿಸಿದ್ದರು. ಆಯೋಜಕರು ಸೀಟಿ ಊದೋದೆ ತಡ ವೃದ್ಧೆ ರೇಸ್ ಕುದುರೆಯಂತೆ ಟ್ರ್ಯಾಕ್ ಮೇಲೆ ಓಡಿದ್ದಾಳೆ. 100 ಮೀಟರ್ ಓಟವನ್ನು ಕೇವಲ 49 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.

80ರ ಹರೆಯದಲ್ಲೂ ಈ ಅಜ್ಜಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಶಕ್ತಿ ಪ್ರದರ್ಶಿಸುತ್ತಿರುವುದು ಗಮನಾರ್ಹ. ಮೀರತ್ ನ ಬೀರಿ ದೇವಿ 100 ಮೀಟರ್ ಓಟವನ್ನು 49 ಸೆಕೆಂಡ್ ಗಳಲ್ಲಿ ಮುಗಿಸಿದ್ದು ನಿಜಕ್ಕೂ ಗ್ರೇಟ್ ಅಂತಿದಾರೆ. ಅಜ್ಜಿಯ ಫಿಟ್ನೆಸ್, ಉತ್ಸಾಹಕ್ಕೆ ಎಲ್ಲರೂ ಮಾರುಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!