Thursday, February 2, 2023

Latest Posts

ಸಿದ್ದೇಶ್ವರ ಸ್ವಾಮೀಜಿ ಪುಣ್ಯ ಸ್ಮೃತಿಗೆ ಆರ್‌ಎಸ್‌ಎಸ್‌ ನಮನ-ದತ್ತಾತ್ರೇಯ ಹೊಸಬಾಳೆ ಶೋಕ ಸಂದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಅಗಲಿದ ಹಿರಿಯ ಸಂತ ವಿಜಾಪುರದ ಜ್ಞಾನ ಯೋಗಾನಂದಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇಂದು ದೇವಲೋಕಕ್ಕೆ ತೆರಳಿದ ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪುಣ್ಯ ಸ್ಮೃತಿಗೆ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ. ಜನತೆಯು ಪೂಜ್ಯಶ್ರೀಗಳನ್ನು ನಡೆದಾಡುವ ದೇವರೆಂದೇ ಭಕ್ತಿ ತೋರಿತು. ಆಧ್ಯಾತ್ಮಿಕ ಸಾಧನೆಯ ಶಿಖರವೇರಿದ, ಜನರು ನೈತಿಕ ಹಾಗೂ ಧಾರ್ಮಿಕವಾಗಿ ಉನ್ನತಿಗೇರುವಂತೆ ಸತತವಾಗಿ ಬೆಳಕು ನೀಡಿದ ಸಾತ್ವಿಕ ದೀಪ ಆರಿಹೋಯಿತು.

ಇಡೀ ನಾಡೇ ಇಂದು ಕಂಬನಿ ಹರಿಸುತ್ತಿದೆ. ಅಸಂಖ್ಯ ಜನರಿಗೆ ಧರ್ಮದೀಕ್ಷೆಯನ್ನೂ ಕರ್ತವ್ಯಬೋಧೆಯನ್ನೂ ನೀಡಿದ್ದ ಅವರ ಜೀವನ ಸಂದೇಶವು ಚಿರಕಾಲ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ. ಜ್ಞಾನ, ಸೇವೆ, ಕರುಣೆ, ಪ್ರೀತಿಗಳ ಸಾಕಾರಮೂರ್ತಿಯಾಗಿದ್ದ ಜ್ಞಾನಯೋಗಾಶ್ರಮದ ಸಂತರ ಪಾವನ ಸ್ಮೃತಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಶತ ಶತ ನಮನಗಳನ್ನು ಸಲ್ಲಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!