RCBಯ ಈ ನಾಲ್ಕು ಪ್ರಾಬ್ಲಮ್ಸ್ ಗೆ​ ಒಂದೇ ಸೊಲ್ಯೂಷನ್, ಅದುವೇ K.G.F!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿಯನ್ನು RCB ಗೆದ್ದು ಬಹು ವರ್ಷಗಳ RCB ಅಭಿಮಾನಿಗಳ ಕನಸು ನನಸಾಗಿದೆ . ಆದರೆ ಇದೀಗ ಐಪಿಎಲ್ ಶುರುವಾಗಲಿದೆ, ಈ ಬಾರಿ ಆದರೂ ನಮ್ಮ RCB ಹುಡುಗರು ಕಪ್ ಗೆದ್ದು ಅಭಿಮಾನಿಗಳಿಗೆ ಡಬಲ್ ಧಮಾಕ ನೀಡಲಿದ್ದಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ. ಆದರೆ ಈ ಬಾರಿಯ RCB ತಂಡದಲ್ಲಿ ಹಲವು ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳಿಗೆ ಏನು ಪರಿಹಾರ?

RCB ತಂಡಕ್ಕೆ ದೊಡ್ಡ ಸಮಸ್ಯೆ ಅಂದರೆ ಅದು ಬ್ಯಾಟ್ಸ್​​ಮನ್​ಗಳು. ಬ್ಯಾಟಿಂಗ್​ನಲ್ಲಿ ಈಗಾಗಲೇ ತ್ರಿಮೂರ್ತಿಗಳಾದ ಫಾಫ್​​ ಡುಪ್ಲೆಸಿಸ್, ಮ್ಯಾಕ್ಸ್​ವೆಲ್, ಕೊಹ್ಲಿ ​ಹೆಚ್ಚು ಡಿಫೆಂಡ್ ಆಗಿದ್ದಾರೆ. ಇವರನ್ನ ಹೊರತು ಪಡಿಸಿ ಉಳಿದ ಬ್ಯಾಟ್ಸ್​​ಮನ್​ಗಳು ಅಷ್ಟಕ್ಕೇ ಅಷ್ಟೇ.

ಕಳೆದ ಐಪಿಎಲ್‌ನಲ್ಲಿ ನಾಯಕ ಫಾಫ್​​ ಡುಪ್ಲೆಸಿಸ್ ಸರಾಸರಿ 29.18 ಮತ್ತು ವಿರಾಟ್ ಕೊಹ್ಲಿ 25.54 ಸರಾಸರಿ ಹೊಂದಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್ ಸರಾಸರಿ 15.99 ಅಂಕಗಳನ್ನು ಹೊಂದಿದ್ದಾರೆ. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳ ಸರಾಸರಿ ಕೇವಲ 24.94 ಮಾತ್ರ.

ಕಳೆದ ಬಾರಿ ಎಲ್ಲಾ RCB ಸ್ಪಿನ್ನರ್‌ಗಳು ತುಂಬ ಸ್ಟ್ರಾಂಗ್ ಆಗಿ ಇದ್ದವು. ಆದರೆ ಈ ಸಲ ವಾನಿಂದು ಹಸರಂಗ ರನ್ನ ಕೈಬಿಟ್ಟಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!