Monday, September 26, 2022

Latest Posts

ಟಿವಿ ಆಫ್ ಮಾಡಿದ್ದಕ್ಕೆ ಅತ್ತೆಯ ಬೆರಳುಗಳನ್ನು ಕಚ್ಚಿದ ಸೊಸೆ: ಮಧ್ಯಪ್ರವೇಶಿಸಿದ ಪತಿಗೂ ಬಿತ್ತು ಕಪಾಳಮೋಕ್ಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟಿವಿ ಆಫ್ ಮಾಡಿದ್ದಕ್ಕೆ ಅತ್ತೆಯ ಮೂರು ಬೆರಳುಗಳನ್ನು ಕಚ್ಚಿದ ಮಹಿಳೆ ಪತಿಗೆ ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

60 ವರ್ಷದ ಅತ್ತೆ ದೂರದರ್ಶನ ಸೆಟ್ ಆಫ್ ಮಾಡಿದ್ದು, ಆಕ್ರೋಶಗೊಂಡ ಸೊಸೆ ಅವರ ಮೂರು ಬೆರಳುಗಳನ್ನು ಕಚ್ಚಿದ್ದಾಳೆ.

ವೃಶಾಲಿ ಕುಲಕರ್ಣಿ ಅವರು ತಮ್ಮ ಮನೆಯಲ್ಲಿ ಭಜನೆ ಪಠಿಸುತ್ತಿದ್ದಾಗ ಅವರ 32 ವರ್ಷದ ಸೊಸೆ ವಿಜಯಾ ಕುಲಕರ್ಣಿ ದೂರದರ್ಶನ ವೀಕ್ಷಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಸೋಮವಾರ ಬೆಳಗ್ಗೆ ವೃಶಾಲಿ ವಿಜಯಾ ಅವರು ಭಜನೆ ಹಾಡುತ್ತಿದ್ದರಿಂದ ದೂರದರ್ಶನದ ಸದ್ದು ಕಡಿಮೆ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಅತ್ತೆ ಸೊಸೆ ನಡುವೆ ಜಗಳವಾಗಿದೆ. ಟೆಲಿವಿಷನ್ ಸೆಟ್ ಆಫ್ ಮಾಡಿದಾಗ ಸೊಸೆ ವೃದ್ಧೆಯ ಕೈ ಹಿಡಿದು ಮೂರು ಬೆರಳುಗಳನ್ನು ಕಚ್ಚಿದ್ದಾಳೆ. ಮಧ್ಯಪ್ರವೇಶಿಸಲು ಯತ್ನಿಸಿದ ಪತಿಗೂ ಕಪಾಳಮೋಕ್ಷ ಮಾಡಿದ್ದಾಳೆ ಎಂದು ಶಿವಾಜಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳು ವೃಶಾಲಿ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮಹಿಳೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!