CBSE 12ನೇ ತರಗತಿ ಕಂಪಾರ್ಟ್ಮೆಂಟ್ ಫಲಿತಾಂಶ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) ಇಂದು 12 ನೇ ತರಗತಿ ಕಂಪಾರ್ಟ್ಮೆಂಟ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.

ಸಿಬಿಎಸ್‌ಇ 12 ನೇ ತರಗತಿ ಕಂಪಾರ್ಟ್ಮೆಂಟ್ ಪರೀಕ್ಷೆಯನ್ನು ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ results.cbse.nic.in, results.gov.in ಮತ್ತು cbse.gov.in ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ಅಭ್ಯರ್ಥಿಗಳು ತಮ್ಮ ಸಿಬಿಎಸ್‌ಇ 12 ನೇ ತರಗತಿ ಕಂಪಾರ್ಟ್ಮೆಂಟ್ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಲು ತಮ್ಮ ಲಾಗಿನ್ ವಿವರಗಳನ್ನು ಬಳಸಬೇಕಾಗುತ್ತದೆ.

ಸಿಬಿಎಸ್‌ಇ ಆಗಸ್ಟ್ 23 ರಂದು 12ನೇ ತರಗತಿ ಕಂಪಾರ್ಟ್ಮೆಂಟ್ ಪರೀಕ್ಷೆಗಳನ್ನು ನಡೆಸಿತ್ತು. 10 ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಆಗಸ್ಟ್ 23-29 ರವರೆಗೆ ಸಿಬಿಎಸ್‌ಇ ಕಂಪಾರ್ಟ್ಮೆಂಟ್ ಪರೀಕ್ಷೆಗಳನ್ನು ಬರೆದರು.
ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ- cbse.gov.in, ಸಿಬಿಎಸ್‌ಇ ಅಂಕಪಟ್ಟಿ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಳಿಗಾಗಿ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು 2 ಹಂತಗಳಲ್ಲಿ ನಡೆಸಿತು. 12 ನೇ ತರಗತಿಯಲ್ಲಿ ಒಟ್ಟಾರೆ ಉತ್ತೀರ್ಣತೆಯ ಶೇಕಡಾವಾರು 92.71% ಮತ್ತು 10 ನೇ ತರಗತಿಗೆ ಇದು 94.40% ಆಗಿತ್ತು.

ಫಲಿತಾಂಶ ವೀಕ್ಷಿಸಲು ಈ ಹಂತ ಅನುಸರಿಸಿ
ವಿದ್ಯಾರ್ಥಿಗಳು results.cbse.nic.in, results.gov.in ಮತ್ತು cbse.gov.in ಗೆ ಭೇಟಿ ನೀಡಿ
ಈ ವೆಬ್ ಸೈಟ್ ನಲ್ಲಿ ಫಲಿತಾಂಶದ ಲಿಂಕ್ ನಿಮ್ಮ ಲಾಗಿನ್ ಐಡಿ, ಪಾಸ್ ವರ್ಡ್ ದಾಖಲಿಸಿ
ಈ ಬಳಿಕ ನೀವು ಫಲಿತಾಂಶ ವೀಕ್ಷಿಸಬಹುದಾಗಿದು. ಆಗ ರಿಸಲ್ಟ್ ಡೌನ್ ಲೋಡ್ ಮಾಡಿಕೊಳ್ಳಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!