Wednesday, September 27, 2023

Latest Posts

ಮೊಮ್ಮಗಳನ್ನು ಸೇನೆಗೆ ಸೇರಿಸಿ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುವೆ: ಆಶೀಶ್ ಢೋನ್‍ಚಕ್ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊಮ್ಮಗಳನ್ನು ಸೇನೆಗೆ ಸೇರಿಸಿ ನನ್ನ ಮಗನನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಲೂತ್ತೇವೆ ಎಂದು ಹುತಾತ್ಮ ಯೋಧ ಮೇಜರ್ ಆಶೀಶ್ ಢೋನ್‍ಚಕ್ (Major Aashish Dhonchak) ತಾಯಿ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ (jammu Kashmir) ಅನಂತ್‍ನಾಗ್‍ನಲ್ಲಿ ಸೇನೆ ಹಾಗೂ ಉಗ್ರರ ಜೊತೆ ನಡೆದ ಗುಮಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದರು. ಯೋಧರ ಅಂತ್ಯಕ್ರಿಯೆಯು ತಾಯ್ನಾಡಿನಲ್ಲಿ ನಡೆದಿದೆ.

ಪಾಣಿಪತ್‍ನ (Panipat) ಬಿಂಜೋಲ್‍ನಲ್ಲಿ ಯೋಧ ಮೇಜರ್ ಆಶೀಶ್ ಢೋನ್‍ಚಕ್ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಅಭಿಮಾನಿಗಳು, ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬದವರು ಪಾಣಿಪತ್‍ನಲ್ಲಿ ಹೊಸದಾಗಿ ನಿರ್ಮಿಸಿದ ಅವರ ಮನೆಯಿಂದ ಅವರ ತವರು ಬಿಂಜೋಲ್‍ಗೆ ನಡೆದುಕೊಂಡು ಹೋದರು.

ಈ ಕ್ಷಣ ಮಾತನಾಡಿದ ತಾಯಿ, ಭಾರತ ಮಾತೆಗಾಗಿ ನನ್ನ ಮಗ ಪ್ರಾಣತ್ಯಾಗ ಮಾಡಿದ್ದಾನೆ. ನನ್ನ ಮಗನ ಬಗ್ಗೆ ನನಗೆ ಹೆಮ್ಮಾಯಾಗುತ್ತಿದೆ. ಆತನಿಗೆ ಎರಡೂವರೆ ವರ್ಷದ ಮಗಳಿದ್ದಾಳೆ. ಆಕೆ ದೊಡ್ಡವಳಾದ ಬಳಿಕ ಸೇನೆಗೆ ಸೇರಿಸುತ್ತೇನೆ. ನನ್ನ ಮೊಮ್ಮಗಳನ್ನು ಯೋಧಳನ್ನಾಗಿ ಮಾಡುತ್ತೇನೆ. ಈ ಮೂಲಕ ಮಗನನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!