ಏಷ್ಯಾಕಪ್ ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯಾಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ (Ravindra Jadeja) ಹೊಸ ದಾಖಲೆ ಮಾಡಿದ್ದಾರೆ. ಬಾಂಗ್ಲಾ ತಂಡದ ಶಮಿಮ್ ಹೊಸೈನ್ ಅವರ ವಿಕೆಟ್ ಪಡೆಯುವ ಮೂಲಕ ಅವರು ಏಕ ದಿನ ಕ್ರಿಕೆಟ್ ಮಾದರಿಯಲ್ಲಿ ಒಟ್ಟು 200 ವಿಕೆಟ್​ಗಳ ಸಾಧನೆ ಮಾಡಿದ್ದಾರೆ.

ಜಡೇಜಾ ತಮ್ಮ 175 ನೇ ಇನಿಂಗ್ಸ್​ನಲ್ಲಿ ಈ ಮೈಲಿಗಲ್ಲು ತಲುಪಿದರು. 50 ಓವರ್​ಗಳ ಪಂದ್ಯದಲ್ಲಿ 200 ವಿಕೆಟ್ ಪಡೆದ ಏಳನೇ ಭಾರತೀಯ ಮತ್ತು ಏಕೈಕ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

34ರ ಹರೆಯದ ಸ್ಪಿನ್ನರ್ 50 ಓವರ್​ಗಳ ಕ್ರಿಕೆಟ್​ನಲ್ಲಿ 7 ಬಾರಿ ನಾಲ್ಕು ವಿಕೆಟ್​ ಹಾಗೂ ಒಂದು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. 2013ರಲ್ಲಿ ಓವಲ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 36 ರನ್​ಗೆ 5 ವಿಕೆಟ್ ಪಡೆದಿರುವುದು ಅವರು ಜೀವನ ಶ್ರೇಷ್ಠ ವಿಕೆಟ್​ ಸಾಧನೆಯಾಗಿದೆ.

2009ರಲ್ಲಿ ವಡೋದರಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಅವರನ್ನು ಔಟ್​ ಮಾಡುವ ಮೂಲಕ ಜಡೇಜಾ ತಮ್ಮ ಮೊದಲ ವಿಕೆಟ್ ಪಡೆದಿದ್ದರು. ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಭಾರತದ ಅತಿ ಹೆಚ್ಚು ಏಕದಿನ ವಿಕೆಟ್ ಪಡೆದವರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಲು ಅವರಿಗೆ ಇನ್ನೂ 54 ವಿಕೆಟ್​ಗಳ ಅಗತ್ಯವಿದೆ. ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ 275 ವಿಕೆಟ್ ಹಾಗೂ ಟಿ20ಐನಲ್ಲಿ 51 ವಿಕೆಟ್ ಕಬಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!