100ನೇ ಟೆಸ್ಟ್ ನಲ್ಲಿ ಡೇವಿಡ್ ವಾರ್ನರ್ ಶತಕ: ಸಾಮಾಜಿಕ ತಾಣದಲ್ಲಿ ಶುಭಾಶಯಗಳ ಮಹಾಪೂರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾದ ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 100 ನೇ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ವಾರ್ನರ್‌ ಬ್ಯಾಟ್‌ ನಿಂದ ಶತಕ ಸಿಡಿದಿರಲಿಲ್ಲ. ಟೀಕೆಗಳಿಗೆಲ್ಲ ಮೆಟ್ಟಿನಿಂತ 36 ವರ್ಷದ ವಾರ್ನರ್, ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ತಮ್ಮ 25 ನೇ ಶತಕ ಸಿಡಿಸಿ 100 ನೇ ಟೆಸ್ಟ್‌ ಅನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ವರ್ನರ್‌ ಪ್ರಸ್ತುತ 158 ರನ್‌ ಸಿಡಿಸಿ ದ್ವಿಶತಕದತ್ತ ದಾಪುಗಾಲಿಟ್ಟಿದ್ದಾರೆ.  ಜೊತೆಗೆ ಈ ಪಂದ್ಯದಲ್ಲಿ 8,000 ಟೆಸ್ಟ್ ರನ್‌ಗಳನ್ನು ಮೈಲುಗಲ್ಲನ್ನೂ ದಾಟಿದ್ದು, ಈ ಸಾಧನೆ ಮಾಡಿದ ಎಂಟನೇ ಆಸ್ಟ್ರೇಲಿಯನ್ ಆಟಗಾರ ಎನಿಸಿಕೊಂಡಿದ್ದಾರೆ. ಇದು ಜನವರಿ 2020 ರ ನಂತರ ಅವರ ಮೊದಲ ಟೆಸ್ಟ್ ಶತಕವಾಗಿದೆ.

 

 

 

 

 

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!