ಬಾಲಯ್ಯ ಶೋನಲ್ಲಿ ಪವನ್‌ ಕಲ್ಯಾಣ್ : ಅನ್ನಪೂರ್ಣ ಸ್ಟುಡಿಯೋ ಬಳಿ ಅಪಾರ ಅಭಿಮಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಕೃಷ್ಣ ಹೋಸ್ಟ್‌ ಆಗಿ ಒಟಿಟಿಯಲ್ಲಿ ಸದ್ದು ಮಾಡುತ್ತಿರುವ ಅನ್‌ಸ್ಟಾಪಬಲ್‌ ಶೋನಲ್ಲಿ ಏಳನೇ ಸಂಚಿಕೆಯಲ್ಲಿ ಪ್ರಭಾಸ್ ಮತ್ತು ಗೋಪಿಚಂದ್ ಬರಲಿದ್ದಾರೆ. ಈ ಸಂಚಿಕೆ ಡಿಸೆಂಬರ್ 30 ರಂದು ಪ್ರಸಾರವಾಗಲಿದೆ. ಪ್ರಭಾಸ್-ಬಾಲಯ್ಯ ಸಂಚಿಕೆಗಾಗಿ ಅಭಿಮಾನಿಗಳು ಮತ್ತು ಪ್ರೇಕ್ಷಕರು ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ.

ಇದೇ ಹೈಪ್‌ ಅಂದರೆ ಇದಕ್ಕೂ ಮೀರಿದ ಹೈಪ್‌ ಸೃಷ್ಟಿಸಲು ಬಾಲಯ್ಯ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಅವರನ್ನು ಶೋಗೆ ಆಹ್ವಾನಿಸಿದ್ದಾರೆ. ಪವನ್, ಬಾಲಯ್ಯ ಎಪಿಸೋಡ್ ಶೂಟಿಂಗ್ ಇಂದು ಡಿಸೆಂಬರ್ 27 ರಂದು ನಡೆಯಲಿದೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯಲಿದೆ. ಬಾಲಯ್ಯ ಅಭಿಮಾನಿಗಳು ಹಾಗೂ ಪವನ್ ಅಭಿಮಾನಿಗಳು ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಜೈ ಬಾಲಯ್ಯ, ಜೈ ಪವರ್ ಸ್ಟಾರ್ ಎಂದು ಅಭಿಮಾನಿಗಳು ಸ್ಟುಡಿಯೋ ಹೊರಗೆ ಗಲಾಟೆ ಮಾಡುತ್ತಿದ್ದಾರೆ. ಇದರೊಂದಿಗೆ ಪವನ್-ಬಾಲಯ್ಯ ಎಪಿಸೋಡ್ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸಂಚಿಕೆಯಲ್ಲಿ ಸಿನಿಮಾಗಳ ಜೊತೆಗೆ ರಾಜಕೀಯವೂ ಚರ್ಚೆಯಾಗಲಿದೆಯೇ ಎಂಬ ಚರ್ಚೆ ರಾಜಕೀಯ ಕ್ಷೇತ್ರ ಹಾಗೂ ಸಿನಿಮಾ ಕ್ಷೇತ್ರದಲ್ಲೂ ಶುರುವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!