ಅರ್ಜುಣಗಿಯಲ್ಲಿ ಡಿಸಿ ಗ್ರಾಮ ವಾಸ್ತವ್ಯ; ಡಿಸಿ ಮತ್ತು ಶಾಸಕ ಎಂ.ವೈ. ಪಾಟೀಲರಿಗೆ ಸ್ವಾಗತ

ಹೊಸದಿಗಂತ ವರದಿ ಕಲಬುರಗಿ: 

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಲು ಅಫಜಲಪೂರ ತಾಲೂಕಿನ ಅರ್ಜುಣಗಿ ಗ್ರಾಮಕ್ಕೆ ಆಗಮಿಸಿದ ಡಿಸಿ ಯಶವಂತ ವಿ. ಗುರುಕರ್ ಮತ್ತು ಸ್ಥಳೀಯ ಶಾಸಕ ಎಂ.ವೈ.ಪಾಟೀಲ ಅವರಿಗೆ ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

ಗ್ರಾಮಕ್ಕೆ ಆಗಮಿಸುತ್ತಿದಂತೆಯೆ ಡಿಸಿ ಯಶವಂತ ವಿ. ಗುರುಕರ್ ಅವರು ಮೊದಲು ಗ್ರಾಮದೇವತೆ ಚೌಡೇಶ್ವರಿಯ ದರ್ಶನ ಪಡೆದರು. ನಂತರ ಗ್ರಾಮಸ್ಥರು ಡಿಸಿ ಮತ್ತು ತಹಶೀಲ್ದಾರ ಸಂಜೀವಕುಮಾರ ದಾಸರ್ ಅವರನ್ನು ಎತ್ತಿನ ಚಕಡಿಯಲ್ಲಿ ಕೂರಿಸಿ ಡೊಳ್ಳು, ಹಲಗೆ ವಾದನ, ಶಾಲಾ ಮಕ್ಕಳ ಲೇಜಿಮ್ ನೃತ್ಯ, ಕೋಲಾಟದ ಕಲರವದೊಂದಿಗೆ ಕಾರ್ಯಕ್ರಮದ ವೇದಿಕೆ ಸ್ಥಳವಾದ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಕರೆತರಲಾಯಿತು.

ಬಡದಾಳ ತೇರಿನಮಠದ ಪೂಜ್ಯ ಡಾ.ಚೆನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ಬಡದಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಅಮೃತ ಮಾತಾರಿ, ಸದಸ್ಯ ಕಮಲಪ್ಪ ವಾಡೇಕರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ.ಎಸ್.ರಾಠೋಡ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

ಗ್ರಾಮ ವಾಸ್ತವ್ಯ ಅಂಗವಾಗಿ ಅರೋಗ್ಯ ಶಿಬಿರ, ಆಧಾರ ನೊಂದಣಿ, ಕುಂದುಕೊರತೆ ಸ್ವೀಕಾರ ಕೇಂದ್ರ, ಪಡಿತರ ವಿತರಣಾ ಕೇಂದ್ರ, ಇ-ಶ್ರಮ್‌ ನೊಂದಣಿ ಕೇಂದ್ರ ತೆರಯಲಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!